ADVERTISEMENT

25 ವರ್ಷಗಳ ಹಿಂದೆ: ಶನಿವಾರ, 25–11–1995

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 19:45 IST
Last Updated 24 ನವೆಂಬರ್ 2020, 19:45 IST
   

ಎಇಎಚ್ ಗ್ರಾಹಕರಿಗೂ ವಿದ್ಯುತ್ ಕಡಿತ ಸಂಭವ
ಬೆಂಗಳೂರು, ನ. 24–
ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ವಿದ್ಯುತ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎಇಎಚ್ (ಸರ್ವ ವಿದ್ಯುತ್ ಗೃಹ) ಗ್ರಾಹಕರಿಗೂ ವಿದ್ಯುತ್ ಕಡಿತದ ಬಿಸಿ ಮುಟ್ಟಿಸುವ ಮತ್ತು ಈಗಾಗಲೇ ಶೇ 50ರಷ್ಟು ಕಡಿತದ ಕಾವನ್ನು ಎದುರಿಸುತ್ತಿರುವ ಹೈಟೆನ್ಷನ್ ಗ್ರಾಹಕರ ವಿದ್ಯುತ್ ಬಳಕೆ ಮತ್ತಷ್ಟು ಮೊಟಕುಗೊಳಿಸುವ ಇಂಗಿತವನ್ನು ವಿದ್ಯುತ್ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಜೆ.ಎಚ್.ಪಟೇಲ್ ಇಂದು ಇಲ್ಲಿ ನೀಡಿದರು.

ಈ ಬಿಕ್ಕಟ್ಟಿನ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ದೊಡ್ಡ ನಗರ, ಪಟ್ಟಣಗಳಲ್ಲಿ ಅಂಗಡಿ–ಮುಂಗಟ್ಟುಗಳನ್ನು ಸಂಜೆ ಏಳು ಗಂಟೆಗೇ ಬಂದ್ ಮಾಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ.

ಕಸಾಪಕ್ಕೆ ಶಾಶ್ವತ ಅನುದಾನ ಶೀಘ್ರ
ಬೆಂಗಳೂರು, ನ. 24–
ಕನ್ನಡ ಸಾಹಿತ್ಯ ಪರಿಷತ್‌ಗೆ ಸರ್ಕಾರ ನೀಡುತ್ತಿರುವ ಸಹಾಯಧನವನ್ನು ಶಾಶ್ವತ ಅನುದಾನ ಯೋಜನೆಯಡಿ ತರಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು ಇಂದು ತಿಳಿಸಿದರು.

ADVERTISEMENT

ಪರಿಷತ್‌ನ ಎಂಟನೇ ಹಾಗೂ ಅಂತಿಮ ನಿಘಂಟಿನ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಪರಿಷತ್ ಸಿಬ್ಬಂದಿ ವೆಚ್ಚಕ್ಕೆ ಪ್ರತಿವರ್ಷ 18 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.