ADVERTISEMENT

25 ವರ್ಷಗಳ ಹಿಂದೆ: ಶನಿವಾರ, 23–12–1995

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 20:27 IST
Last Updated 22 ಡಿಸೆಂಬರ್ 2020, 20:27 IST
   

ಕಾವೇರಿ ಚರ್ಚೆಗೆ ವಿಶೇಷ ಅಧಿವೇಶನ ರಾಜ್ಯದ ರೈತರ ಹಿತ ರಕ್ಷಣೆಗೆ ಆದ್ಯತೆ
ಬೆಂಗಳೂರು, ಡಿ. 22– ತಮಿಳುನಾಡಿಗೆ 11 ಟಿಎಂಸಿ ಅಡಿ ನೀರನ್ನು ಬಿಡಲು ಕಾವೇರಿ ನ್ಯಾಯಮಂಡಳಿ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ‘ರಾಜ್ಯದ ಜಲಾಶಯಗಳಲ್ಲೇ ನೀರಿಲ್ಲದ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಹಿತ ಬಲಿ ಕೊಡಲು ಸಾಧ್ಯವಿಲ್ಲ’ ಎಂದು ಸರ್ವ ಪಕ್ಷಗಳ ಮುಖಂಡರ ಸಭೆ ಒಮ್ಮತದ ನಿರ್ಣಯವನ್ನು ಇಂದು ಇಲ್ಲಿ ಕೈಗೊಂಡಿತು.

ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಸೇರಿದ್ದ ಸರ್ವ ಪಕ್ಷಗಳ ಮುಖಂಡರ ಸಭೆ ಈ ನಿರ್ಣಯ ಕೈಗೊಳ್ಳುವ ಮುನ್ನ, ಸಚಿವ ಸಂಪುಟ ಸಭೆ ಸೇರಿ ಈ ವಿಷಯದ ಬಗ್ಗೆ ಚರ್ಚಿಸಿತು.

ಸರ್ವ ಪಕ್ಷಗಳ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಬಂಗಾರಪ್ಪ, ಎಂ.ವೀರಪ್ಪ ಮೊಯಿಲಿ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಚ್.ಕೆ.ಪಾಟೀಲ್, ಅವರೊಂದಿಗೆ ಬಿಜೆಪಿ ಮುಖಂಡ ಎಚ್‌.ಎನ್‌.ನಂಜೇಗೌಡ, ರಾಮಚಂದ್ರ ಗೌಡ ಇದ್ದರು.

ADVERTISEMENT

ಅನುಮಾನಾಸ್ಪದ ವಿಮಾನ ವಶ
ನವದೆಹಲಿ, ಡಿ. 22 (ಪಿಟಿಐ)– ಪಶ್ಚಿಮ ಬಂಗಾಳದ ಪುರ್ಲಿಯಾ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಇಳಿಸಿದ ವಿಮಾನವೆಂದು ನಂಬಲಾದ ವಿದೇಶಿ ವಿಮಾನವೊಂದನ್ನು ಭಾರತದ ವಾಯುಪಡೆಯ ಎರಡು ವಿಮಾನಗಳು ಇಂದು ಬೆಳಗಿನ ಜಾವ ತಡೆದು ಮುಂಬೈಯಲ್ಲಿ ಬಲವಂತವಾಗಿ ಇಳಿಸಿವೆ.

ಇದರಿಂದಾಗಿ ವಿಮಾನದಿಂದ ಶಸ್ತ್ರಾಸ್ತ್ರ ಎಸೆದ ನಿಗೂಢ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ದೊರೆಯಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.