ತಂತ್ರಜ್ಞಾನ: ಭಾರತ–ಅಮೆರಿಕ ಒಪ್ಪಂದ ಸದ್ಯಕ್ಕೆ ಅಸಂಭವ
ನ್ಯೂಯಾರ್ಕ್, ಮೇ 15 (ಪಿಟಿಐ)– ಭಾರತೀಯ ಸಾಂಸ್ಕೃತಿಕ ಕ್ಷೇತ್ರಗಳ ರಕ್ಷಣೆ ಕುರಿತು ಭಾರತ ಮತ್ತು ಅಮೆರಿಕ ಒಪ್ಪಂದಕ್ಕೆ ಸಹಿ ಹಾಕಲು ಸಜ್ಜಾಗಿವೆ. ಆದರೆ, ವಿಜ್ಞಾನ ಹಾಗೂ ತಂತ್ರಜ್ಞಾನದ ಮುಖ್ಯ ಒಪ್ಪಂದ, ಪ್ರಧಾನಿಯವರು ಅಮೆರಿಕಕ್ಕೆ ಪ್ರಸಕ್ತವಾಗಿ ನೀಡಿರುವ ಭೇಟಿಯ ಕಾಲದಲ್ಲಿ ಕೈಗೂಡದೇ ಹೋಗುವ ಸಾಧ್ಯತೆಗಳು ಅಧಿಕವಾಗಿವೆ.
ತಂತ್ರಜ್ಞಾನದ ಒಪ್ಪಂದವನ್ನು ಪ್ರಧಾನಿಯವರ ಈ ಭೇಟಿಯ ಕಾಲದಲ್ಲಿಯೇ ಸಾಧಿಸಲು ಯತ್ನಗಳು ಈಗ ನಡೆದಿವೆ. ಇದಲ್ಲದೆ, ಬಂಡವಾಳ ಹೂಡಿಕೆಗೆ ಉತ್ತೇಜನ ಮತ್ತು ಸಾಂಪ್ರದಾಯಿಕವಲ್ಲದ ಇಂಧನ ಕ್ಷೇತ್ರಗಳಲ್ಲಿ ಪರಸ್ಪರ ಒಪ್ಪಂದಕ್ಕೆ ಉಂಟಾಗಿರುವ ಅಡ್ಡಿ ನಿವಾರಿಸಲು ಉಭಯ ದೇಶಗಳ ಅಧಿಕಾರಿಗಳು ತೀವ್ರವಾಗಿ ಯತ್ನಿಸುತ್ತಿದ್ದಾರೆ.
ಆಗ್ರಾದ ತಾಜ್‌ಮಹಲ್ ಮುಂತಾದ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಅಮೆರಿಕದ ಪಾರ್ಕ್ಸ್ ಸರ್ವಿಸಸ್ ನೆರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.