ADVERTISEMENT

ಶುಕ್ರವಾರ, 24–6–1994

1994

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 20:00 IST
Last Updated 23 ಜೂನ್ 2019, 20:00 IST

‘ದಳ ಇಬ್ಭಾಗಕ್ಕೆ ಪಟ್ಟಭದ್ರರ ಹಟ ಕಾರಣ’

ಕಲ್ಬುರ್ಗಿ, ಜೂನ್ 23– ಎಸ್.ಆರ್. ಬೊಮ್ಮಾಯಿಯವರನ್ನು ಜನತಾದಳದ ಅಧ್ಯಕ್ಷತೆಯಿಂದ ಕೆಳಗಿಳಿಸಬೇಕು ಎಂಬ ಮೊಂಡು ಹಟ ಹಿಡಿದ ಕೆಲವು ಹಿತಾಸಕ್ತಿಗಳಿಂದಲೇ ಜನತಾದಳವು ಕೇಂದ್ರದಲ್ಲಿ ಮತ್ತೆ ಇಬ್ಭಾಗಗೊಳ್ಳುವಂತಾಯಿತೆಂದು, ದಳವನ್ನು ರಾಷ್ಟ್ರದಲ್ಲಿ ಮೂರನೆಯ ಪ್ರಬಲ ಶಕ್ತಿಯನ್ನಾಗಿ ರೂಪಿಸುವ ತಮ್ಮ ಪ್ರಯತ್ನಕ್ಕೆ ಇದರಿಂದ ತೀವ್ರ ಆಘಾತವಾದಂತಾಗಿದೆ ಎಂದು ದಳದ ಹಿರಿಯ ಮುಖಂಡ ರಾಮಕೃಷ್ಣ ಹೆಗಡೆ ವಿಷಾದ ವ್ಯಕ್ತಪಡಿಸಿದರು.

ರೋರಿಚ್ ಆಸ್ತಿ: ಕ್ಯಾಸೆಟ್ ಪತ್ತೆ

ADVERTISEMENT

ಬೆಂಗಳೂರು, ಜೂನ್ 23– ರೋರಿಚ್ ಆಸ್ತಿ ಕಳವಿನ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ತನಿಖಾ ವಿಭಾಗದ ಪೊಲೀಸರಿಗೆ ಮಹತ್ವದ ವಿಡಿಯೊ ಕ್ಯಾಸೆಟ್ ಹಾಗೂ ದಾಖಲೆಗಳು ಸಿಕ್ಕಿವೆ. ರೋರಿಚ್ ಅವರ ಆಸ್ತಿ, ಕಲಾಕೃತಿಗಳು ಹಾಗೂ ಶಿಲ್ಪಕಲೆಗಳನ್ನು ಕ್ಯಾಸೆಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಬೆಂಗಳೂರಿನಲ್ಲಿ 1992ರಲ್ಲಿ ರೋರಿಚ್ ಅವರು ಏರ್ಪಡಿಸಿದ್ದ ಸಮಾರಂಭದ ಸಮಯದಲ್ಲಿ ರಷ್ಯದ ದೂರದರ್ಶನ ತಂಡ ವಿಡಿಯೊ ಚಿತ್ರೀಕರಣ ಮಾಡಿತ್ತು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.