ADVERTISEMENT

ಸೋಮವಾರ, 18–7–1994

ಸೋಮವಾರ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 16:13 IST
Last Updated 17 ಜುಲೈ 2019, 16:13 IST

ವಿಶ್ವಕಪ್‌ ‘ಸುಗ್ಗಿ’ಗೆ ಅಂತಿಮ ತೆರೆ

ಲಾಸ್‌ ಏಂಜಲ್ಸ್, ಜುಲೈ 17– ವಿಶ್ವ ಕಪ್ ಫುಟ್‌ಬಾಲ್ ಅಮೆರಿಕದ ಆತಿಥ್ಯದಲ್ಲಿ ಹೊಸ ಮೆರುಗು ಪಡೆಯಿತು. ಕಳೆದ ಒಂದು ತಿಂಗಳಿಂದ ನಡೆದ ‘ಫುಟ್‌ಬಾಲ್ ಸುಗ್ಗಿ’ ವಿಶ್ವದಾದ್ಯಂತ ಕೋಟ್ಯಂತರಫುಟ್‌ಬಾಲ್ ಪ್ರಿಯರನ್ನು ರೋಮಾಂಚನದ ಉತ್ತುಂಗಕ್ಕೆ ಕೊಂಡೊಯ್ಯುವುದರಲ್ಲಿ ಯಶ ಪಡೆಯಿತು. ಈ ವರದಿ ಓದುವ ವೇಳೆಗೆ ನಿರ್ಣಾಯಕ ‘ಹೋರಾಟ’ ಮುಗಿದು, ಅಂತಿಮ ತೆರೆ ಬಿದ್ದಿರುತ್ತೆ. ಹಿಂದೆಂದೂ ಕಂಡು ಕೇಳರಿಯದ ಮಟ್ಟಿಗೆ ಶಾಂತಿಯುತವಾಗಿ, ವೈಭವೋಪೇತವಾಗಿ ನಡೆದ ಹದಿನೈದನೇ ವಿಶ್ವ ಕಪ್ ‘ಸಮರ’ ಹಲವು ದಾಖಲೆಗಳನ್ನು ಸೃಷ್ಟಿಸಿತು.

ಒಂಬತ್ತು ಭವ್ಯ ಕ್ರೀಡಾಂಗಣಗಳಲ್ಲಿ ಈವರೆಗೆ ಸುಮಾರು 3.5 ದಶಲಕ್ಷ ಫುಟ್‌ಬಾಲ್ ಪ್ರಿಯರು ಪಂದ್ಯಗಳನ್ನು ವೀಕ್ಷಿಸಿದರು. ಇದೊಂದು ದಾಖಲೆಯೇ. ಕಳೆದ ಒಂದು ತಿಂಗಳ ಕಾಲ ಪಂದ್ಯ ನಡೆಯುವ ಕಡೆಯಲ್ಲೆಲ್ಲಾ ಪೊಲೀಸರ ಭಾರಿ ಬಿಗಿ ಬಂದೋಬಸ್ತು ಏರ್ಪಡಿಸಲಾಗಿತ್ತು.

ADVERTISEMENT

ಆದರೆ ಯಾವುದೇ ಗಲಭೆ, ಗೊಂದಲ ಉಂಟಾಗಲಿಲ್ಲ. ಹಿಂದೆಲ್ಲಾ ಗಲಭೆ, ಘರ್ಷಣೆ, ಸಾವು ನೋವುಗಳಿಲ್ಲದೆ ಈ ಕೂಟ ಮುಗಿದದ್ದೇ ಇಲ್ಲ.

ತಲಾಖ್ ಅಸಿಂಧು ಪ್ರಶ್ನೆ ಸುಪ್ರೀಂ ಕೋರ್ಟಿಗೆ

ನವದೆಹಲಿ, ಜುಲೈ 17 (ಪಿಟಿಐ)– ಗಂಡ ಹೆಂಡತಿಗೆ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ಕೊಡುವುದು ಸಂವಿಧಾನ ಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.