ADVERTISEMENT

ಗುರುವಾರ, 21–7–1994

ಗುರುವಾರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 19:23 IST
Last Updated 20 ಜುಲೈ 2019, 19:23 IST

ಕೂಡಲಸಂಗಮ ಬಳಿ ವಾಹನ ದುರಂತ: 16 ಜನರ ಸಜೀವ ದಹನ

ವಿಜಾಪುರ, ಜುಲೈ 20– ಹುನಗುಂದ ತಾಲ್ಲೂಕಿನ ಸಂಗಮ ಕ್ರಾಸ್ ಬಳಿ ಕರ್ನಾಟಕ ರಾಜ್ಯ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಟ್ಯಾಂಕರ್ ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಜೀಪೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ 16 ಮಂದಿ ಪ್ರಯಾಣಿಕರು ಸಜೀವವಾಗಿ ದಹನವಾದರು.

ಡಿಕ್ಕಿ ಎಷ್ಟು ಬಲವಾಗಿತ್ತೆಂದರೆ ಬೆಂಕಿ ಹೊತ್ತಿಕೊಂಡು ಎರಡೂ ವಾಹನಗಳು ಪೂರ್ತಿ ಸುಟ್ಟು ಹೋಗಿದೆ. ಜೀಪಿನಲ್ಲಿದ್ದ ಎಲ್ಲ 16 ಜನರು ಸುಟ್ಟು ಕರಕಲಾಗಿದ್ದು ಗುರುತು ಸಿಗುತ್ತಿಲ್ಲ. ಟ್ಯಾಂಕರ್ ರೆಕ್ಟಿಫೈಡ್ ಸ್ಪಿರಿಟ್ ತುಂಬಿಕೊಂಡು ಉಗಾರಖುರ್ದುನಿಂದ ಕುಷ್ಟಗಿಗೆ ಹೊರಟಿತ್ತು.

ADVERTISEMENT

ಗುರುವಿನಲ್ಲಿ ನೀರಿಗಾಗಿ ಹುಡುಕಾಟ

ವಾಷಿಂಗ್ಟನ್, ಜುಲೈ 20 (ಎಪಿ)– ಗುರುಗ್ರಹದಲ್ಲಿ ನೀರಿನ ಅಂಶ ಇಲ್ಲದಿರುವುದು ಧೂಮಕೇತು ಡಿಕ್ಕಿ ಕಾಲಕ್ಕೆ ಹೊಮ್ಮಿದ ಬೆಳಕಿನ ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳು ಅಚ್ಚರಿ ಮೂಡಿಸಿದೆ.

ಗುರುವಿನ ವಾತಾವರಣದಲ್ಲಿ ಶೇ 74 ಭಾಗ ಜಲಜನಕವಿದೆ. ಅದನ್ನು ಅಪ್ಪಳಿಸುತ್ತಿರುವ ಧೂಮಕೇತು ತುಣುಕುಗಳಲ್ಲಿ ಆಮ್ಲಜನಕ ಗಣನೀಯ ಪ್ರಮಾಣದಲ್ಲಿದೆ. ಇವೆರಡರ ಸಂಯೋಗ ನೀರಿಗೆ ಉತ್ಪತ್ತಿಗೆ ಕಾರಣವಾಗಿರುವುದರಿಂದ ಗುರುಗ್ರಹದಲ್ಲಿ ನೀರಿಗೆ ಹುಡುಕಾಟ ನಡೆಸುವಲ್ಲಿ ವಿಶ್ವದ ವಿಜ್ಞಾನಿಗಳು ಹೆಚ್ಚು ಆಸಕ್ತಿ ವಹಿಸಿದ್ದರು.

ಆದರೆ ಇದುವರೆಗೆ ನೀರಿನ ಇರುವಿಕೆ ಕಂಡುಬಂದಿಲ್ಲ ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿ ಲೂಸಿ ಮೆಕ್‌ಫಡಿಸ್ ಇಲ್ಲಿ ತಿಳಿಸಿದರು.

ಈಗ ಆನೆಗಳಿಗೆ ರೇಡಿಯೋ ಕಾಲರ್

ಮೈಸೂರು, ಜುಲೈ 20– ಮುಂಬೈನ ಪ್ರಾಕೃತಿಕ ಇತಿಹಾಸ ಸೊಸೈಟಿಯು ಕಾಡಾನೆಗಳ ಸಹಜ ವಲಸೆ ಮಾರ್ಗವನ್ನು ತಿಳಿಯಲು ರೇಡಿಯೋ ಕಾಲರ್ ಅಳವಡಿಕೆ ತಂತ್ರವನ್ನು ಅನುಸರಿಸಿ ಪ್ರಯೋಗನಿರತವಾಗಿದೆ.

1984ರಲ್ಲಿಯೇ ಈ ಪ‍್ರಯೋಗ ಆರಂಭವಾಗಿದ್ದು ಆನೆಗಳು ಮೇವು ಹಾಗೂ ನೆಲೆಯನ್ನು ಅರಸಿ ಸಾಗುವ ವಲಸೆ ಮಾರ್ಗಗಳನ್ನು ಪತ್ತೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.