ADVERTISEMENT

25 ವರ್ಷಗಳ ಹಿಂದೆ | ಶನಿವಾರ, 31 ಜನವರಿ 1998

ಪ್ರಜಾವಾಣಿ ವಿಶೇಷ
Published 31 ಜನವರಿ 2023, 6:22 IST
Last Updated 31 ಜನವರಿ 2023, 6:22 IST
   

ಸಾಧನೆ ತೋರಲು ಸಮಯ ಬೇಕಿತ್ತು: ಗುಜ್ರಾಲ್
ನವದೆಹಲಿ, ಜ. 30 (ಪಿಟಿಐ)–
ಸಾರ್ವಜನಿಕ ಜೀವನದಲ್ಲಿ ನೂತನ ಸಂಹಿತೆ ಅಳವಡಿಸಿ ಹುದ್ದೆಗೆ ಗೌರವ ತರುವ ತಮ್ಮ ಕಾರ್ಯಕ್ರಮ ಗಳನ್ನು ಪೂರ್ಣಗೊಳಿಸಲು ಇನ್ನೂ ಸ್ವಲ್ಪ ಸಮಯ ಬೇಕಿತ್ತು ಎಂದು ಪ್ರಧಾನಿ ಐ.ಕೆ. ಗುಜ್ರಾಲ್ ಅವರು ಹೇಳಿದ್ದಾರೆ.

ಮುಂಬೈನಲ್ಲಿ 1946ರ ಜುಲೈ 6ರಂದು ನಡೆದ ಕಾಂಗ್ರೆಸ್ ಅಧಿವೇಶನದ ವೇಳೆ ಅಸೋಸಿಯೇಟೆಡ್ ಪ್ರೆಸ್‌ನ (ಎಪಿ) ಛಾಯಾಗ್ರಾಹಕ ಮ್ಯಾಕ್ಸ್ ಡೆಸ್ಟರ್ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಗಾಂಧಿ– ನೆಹರೂ ಅವರ ಭಾವಚಿತ್ರವನ್ನು ಇಂದು ಸ್ವೀಕರಿಸಿದ ಬಳಿಕ ಗುಜ್ರಾಲ್ ಅವರು ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು.

ಸಂಯುಕ್ತ ರಂಗವು ಕೇಂದ್ರದಲ್ಲಿ ಯಶಸ್ವಿ ಯಾಗಿ ಸಮ್ಮಿಶ್ರ ಸರ್ಕಾರವನ್ನು ನಿರ್ವಹಿಸಿದೆ ಎಂದ ಅವರು, ಪಾಲುದಾರ ಪಕ್ಷಗಳ ಕಚ್ಚಾಟದಿಂದ ಈ ಸರ್ಕಾರ ಉರುಳಿದ್ದಲ್ಲ ಎಂದು ನೆನಪಿಸಿದರು.

ADVERTISEMENT

ಭ್ರಷ್ಟಾಚಾರರಹಿತ ಸ್ವಚ್ಛ ಆಡಳಿತ, ಎಲ್ಲರಿಗೂ ಪಡಿತರ, ಶಾಲೆ ಸೌಲಭ್ಯ
ನವದೆಹಲಿ, ಜ. 30–
ಉತ್ತಮ ಆಡಳಿತ, ಸಾಮಾಜಿಕ– ಆರ್ಥಿಕ ರಂಗದ ಸರ್ವವ್ಯಾಪಿ ಅಭಿವೃದ್ಧಿ, ಪ್ರತೀ ಕುಟುಂಬಕ್ಕೂ ಆಹಾರ ಧಾನ್ಯ, ಪ್ರತಿಯೊಬ್ಬ ಭಾರತೀಯನೂ ಆರೋಗ್ಯವಂತ ಮತ್ತು ಅಕ್ಷರಸ್ಥನಾಗುವ ಮತ್ತು ಪ್ರತಿಯೊಂದು ಮಗುವೂ ಶಾಲೆಗೆ ಸೇರುವ ವ್ಯವಸ್ಥೆ.

–ಇದು ಸಂಯುಕ್ತ ರಂಗದ ಆಶಯ. ಲೋಕಸಭೆ ಚುನಾವಣೆಗಾಗಿ ಸಂಯುಕ್ತ ರಂಗವು ಈ ಕನಿಷ್ಠ ಕಾರ್ಯಕ್ರಮಗಳು ಮತ್ತು ಜಂಟಿ ನೀತಿ ಘೋಷಣೆಯನ್ನು ಇಂದು ಜನತೆಯ ಮುಂದಿಟ್ಟಿತು.

ಸಂಯುಕ್ತ ರಂಗದ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಂಗದ ಜಂಟಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.