ADVERTISEMENT

25 ವರ್ಷದ ಹಿಂದೆ | ಬುಧವಾರ, 3 ಜೂನ್ 1998

​ಪ್ರಜಾವಾಣಿ ವಾರ್ತೆ
ಪ್ರಜಾವಾಣಿ ವಿಶೇಷ
Published 2 ಜೂನ್ 2023, 19:29 IST
Last Updated 2 ಜೂನ್ 2023, 19:29 IST
   

ಪೆಟ್ರೋಲ್: ರೂ 1ಮಾತ್ರ ಹೆಚ್ಚಳ– ಸರ್ಕಾರದ ಸ್ಪಷ್ಟನೆ

ನವದೆಹಲಿ, ಜೂನ್‌ 2 (ಪಿಟಿಐ)– ಸಾರ್ವಜನಿಕರ ತೀವ್ರ ಒತ್ತಡಕ್ಕೆ ಮಣಿದು ಸರ್ಕಾರ ಪೆಟ್ರೋಲ್‌ ಬೆಲೆಯಲ್ಲಿ ಮಾಡಿದ್ದ ತೀವ್ರ ಏರಿಕೆಯನ್ನು ಇಂದು ಹಿಂತೆಗೆದುಕೊಂಡು ಈ ಹೆಚ್ಚಳವನ್ನು ಲೀಟರಿಗೆ ಒಂದು ರೂಪಾಯಿಗೆ ಮಾತ್ರ ಮಿತಗೊಳಿಸಿತು.

ಬಜೆಟ್ ಮಂಡನೆ ಅನಂತರ ಪೆಟ್ರೋಲಿಯಂ ಸಚಿವಾಲಯ ನಿನ್ನೆ ಮಧ್ಯ ರಾತ್ರಿಯಿಂದ ಲೀಟರಿಗೆ ಸುಮಾರು ನಾಲ್ಕು ರೂಪಾಯಿಯಷ್ಟು ಪೆಟ್ರೋಲ್‌ ಬೆಲೆಯನ್ನು ಏರಿಸಿತ್ತು.

ADVERTISEMENT

ಪೆಟ್ರೋಲ್‌ ಬೆಲೆಯನ್ನು ಈ ರೀತಿ ತೀವ್ರವಾಗಿ ಹೆಚ್ಚಿಸಿದ್ದು ಸಂಸತ್ತಿನ ಎರಡೂ ಸದನಗಳಲ್ಲಿ ಈ ಮುನ್ನ ಭಾರಿ ಕೋಲಾಹಲಕ್ಕೆ ಕಾರಣವಾಯಿತಲ್ಲದೆ ಲೋಕಸಭೆಯಲ್ಲಿ ವಿರೋಧಿ ಸದಸ್ಯರು ಸಭಾತ್ಯಾಗ ಮಾಡುವುದಕ್ಕೂ ಕಾರಣವಾಯಿತು.

ಜಿನೀವಾ: ಕಾಶ್ಮೀರ ಪ್ರಶ್ನೆ ಚರ್ಚೆಗೆ ಅಮೆರಿಕ ಯತ್ನ

ವಾಷಿಂಗ್ಟನ್‌, ಜೂನ್‌ 2– ಜಿನೀವಾದಲ್ಲಿ ಗುರುವಾರ ನಡೆಯಲಿರುವ ಭದ್ರತಾ ಮಂಡಳಿಯ ಐದು ಕಾಯಂ ರಾಷ್ಟ್ರಗಳ ಸಭೆಯ ಕಲಾಪದಲ್ಲಿ ಕಾಶ್ಮೀರ ಪ್ರಶ್ನೆಗೆ ಅತಿ ಹೆಚ್ಚಿನ ಆದ್ಯತೆ ನೀಡಲು ಅಮೆರಿಕ ಉದ್ದೇಶಿಸಿದೆ. ಭಾರತ ಹಾಗೂ ಪಾಕಿಸ್ತಾನ ಪರಮಾಣು ಸ್ಫೋಟ ನಡೆಸಿರುವ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ಚರ್ಚಿಸಲು ಈ ಸಭೆ ಸೇರಲಿದೆ.

‘ಭಾರತ ಹಾಗೂ ಪಾಕಿಸ್ತಾನಗಳ ಮಧ್ಯೆ ಘರ್ಷಣೆಗೆ ಕಾರಣವಾಗಿರುವ ಕಾಶ್ಮೀರ ಪ್ರಶ್ನೆ ಸೇರಿದಂತೆ ವಿವಿಧ ರಾಜಕೀಯ ಸಮಸ್ಯೆಗಳೂ ಈ ಸಭೆಯಲ್ಲಿ ಚರ್ಚೆ ಆಗಬೇಕೆಂಬುದು ನಮ್ಮ ಬಯಕೆ. ಪರಮಾಣು ಅಸ್ತ್ರ ಪೈಪೋಟಿಯನ್ನು ತಡೆಯಬೇಕಿದೆ’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಸುದ್ದಿಗಾರರಿಗೆ ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.