ADVERTISEMENT

25 ವರ್ಷಗಳ ಹಿಂದೆ ‌| ಸೋಮವಾರ 17, ನವೆಂಬರ್ 1997

ಪ್ರಜಾವಾಣಿ ವಿಶೇಷ
Published 16 ನವೆಂಬರ್ 2022, 19:24 IST
Last Updated 16 ನವೆಂಬರ್ 2022, 19:24 IST
   

ದೂರವಾಣಿ ಸಂಭಾಷಣೆ ಕದ್ದಾಲಿಕೆ ತಡೆ: ಹೊಸ ಶಾಸನಕ್ಕೆ ಸಲಹೆ
ನವದೆಹಲಿ, ನವೆಂಬರ್‌ 16 (ಪಿಟಿಐ):
ದೂರವಾಣಿ ಸಂಭಾಷಣೆ ಕದ್ದಾಲಿಸುವುದನ್ನು ತಡೆಯಲು ಹೊಸ ಶಾಸನಕ್ಕೆ ಕರೆ ನೀಡಿರುವ ವಿವಿಧ ಕ್ಷೇತ್ರಗಳ ತಜ್ಞರು, ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ವೈಯಕ್ತಿಕ ಕರೆಗಳನ್ನು ಕದ್ದಾಲಿಸುವುದಕ್ಕೆ ಒಪ್ಪಿದ್ದು, ಒಟ್ಟಾರೆ ವೈಯಕ್ತಿಕ ಸ್ವಾತಂತ್ರ್ಯ ರಕ್ಷಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಸಂಭವಿಸಿದ ಟಾಟಾ ಟೀ ಕಂಪನಿಯ ದೂರವಾಣಿ ಕದ್ದಾಲಿಕೆ ಪ್ರಕರಣ ಎಲ್ಲರ ಕಣ್ತೆರೆಸಿದ್ದು, ಒಂದು ವೇಳೆ ಈ ಸಂಬಂಧ ತುರ್ತು ಕ್ರಮ ಕೈಗೊಳ್ಳದೇ ಇದ್ದರೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬರಲಿದೆ ಎಂದು ರಾಜಕೀಯ ಮುಖಂಡರು, ಶಿಕ್ಷಣ ಕ್ಷೇತ್ರದ ತಜ್ಞರು ಹಾಗೂ ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇರಾಕ್‌ ಮೇಲೆ ದಾಳಿಗೆ ಅಮೆರಿಕ ಸಜ್ಜು
ವಿಶ್ವಸಂಸ್ಥೆ, ನವೆಂಬರ್‌ 16 (ಪಿಟಿಐ):
ಇರಾಕ್‌ ಮೇಲೆ ಅಮೆರಿಕನ್‌ ಯು–2 ವಿಮಾನಗಳು ಹಾರಾಟಕ್ಕೆ ಸಜ್ಜಾಗುತ್ತಿರುವಂತೆ ವಿಶ್ವಸಂಸ್ಥೆಯ ಅಧಿಕಾರಿಗಳು ಮತ್ತು ರಾಜತಾಂತ್ರಿಕರು ಪರಿಸ್ಥಿತಿಹೇಗೆ ತಿರುಗಬಹುದೆಂದು ಆತಂಕದಿಂದ ಗಮನಿಸುತ್ತಿದ್ದಾರೆ.

ADVERTISEMENT

ಇರಾಕ್‌, ಅಮೆರಿಕನ್ ವಿಮಾನಗಳತ್ತ ಕ್ಷಿಪಣಿಗಳನ್ನು ಹಾರಿಸಿದರೆ ಅಮೆರಿಕ ತಕ್ಷಣವೇ ಪ್ರತಿದಾಳಿ ನಡೆಸುವುದು. ಕ್ಷಿಪಣಿಗಳುವಿಮಾನ ಉರುಳಿಸುವ ಸಾಧ್ಯತೆ ಕಮ್ಮಿ, ಆದರೆ ಪರಿಣಾಮ ಬಹಳ ಗಂಭೀರವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.