ಹೆಲಿಕಾಪ್ಟರ್ ದುರಂತದಲ್ಲಿಸಚಿವ ಸೋಮು ಸಾವು
ಕಲ್ಕತ್ತ, ನ. 14– ಕೇಂದ್ರದ ರಕ್ಷಣಾ ಖಾತೆ ರಾಜ್ಯ ಸಚಿವ ಹಾಗೂ ಡಿಎಂಕೆ ಮುಖಂಡ ಎನ್.ವಿ.ಎನ್. ಸೋಮು ಹಾಗೂ ಮೂವರು ಸೇನಾಧಿಕಾರಿಗಳು ಅರುಣಾಚಲ ಪ್ರದೇಶದ ತವಾಂಗ್ ಸಮೀಪ ಇಂದು ಬೆಳಿಗ್ಗೆ ಸಂಭವಿಸಿದ ವಾಯುಪಡೆಯ ಚೇತಕ್ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟರು.
ದುರಂತದಲ್ಲಿ ಮಡಿದವರ ಅವಶೇಷಗಳು ಪತ್ತೆಯಾಗಿರುವ ಪ್ರದೇಶವು ಚೀನಾ ಗಡಿಗೆ ಹೊಂದಿಕೊಂಡಂತಿದೆ. ಸಚಿವರುಅಲ್ಲಿಗೆಏಕೆ ಹೋಗಿದ್ದರು ಎಂಬ ಬಗ್ಗೆ ಇದುವರೆಗೆ ಸೇನೆ ಮೂಲಗಳು ಚಕಾರ ಎತ್ತಿಲ್ಲ.
ಸೋಮಶೇಖರ್‌ಗೆ 3 ವರ್ಷ ಕಠಿಣ ಶಿಕ್ಷೆ
ಬೆಂಗಳೂರು, ನ. 14– ಮೈಸೂರಿನ ಕಾರ್ಮಿಕ ಸತ್ಯದೇವ್ ಕೊಲೆ ಆರೋಪಿಯಾದ ಅಂದಿನ ಮೈಸೂರು ಪೊಲೀಸ್ ಡೆಪ್ಯುಟಿ ಕಮಿಷನರ್ ಸೋಮಶೇಖರ್ ಅವರಿಗೆ ಹೈಕೋರ್ಟ್ ಇಂದು 3 ವರ್ಷಗಳ ಕಠಿಣ ಸಜೆ ಮತ್ತುಒಂದು ಲಕ್ಷ ರೂಪಾಯಿ ಜುಲ್ಮಾನೆಯನ್ನು ವಿಧಿಸಿತು.
ಸೋಮಶೇಖರ್, ಅವರ ಪತ್ನಿ ಹಾಗೂ ಇಬ್ಬರು ಪುತ್ರರು ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್‌ನ ಈಜು ಕೊಳಕ್ಕೆ ಬಂದಿದ್ದರು. ಆಗಈಜುಡುಗೆ ಯಲ್ಲಿದ್ದ ಸೋಮಶೇಖರ್ ಅವರ ಪತ್ನಿ ಯನ್ನು ಸತ್ಯದೇವ್ ಕೆಟ್ಟ ದೃಷ್ಟಿಯಿಂದ ನೋಡಿದನೆಂಬ ಕಾರಣದಿಂದ ಕುಪಿತರಾದ ರೆನ್ನಲಾದ ಸೋಮಶೇಖರ್ ಅವರು ಸತ್ಯದೇವ್‌ಗೆ ಹೊಡೆದ ಕಾರಣದಿಂದ ಆತ ಈಜುಕೊಳಕ್ಕೆ ಬಿದ್ದು ಮೃತಪಟ್ಟಿದ್ದ ಎಂದು ಆಪಾದಿಸಿ ಪೊಲೀಸರುಮೊಕದ್ದಮೆ ದಾಖಲು ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.