ADVERTISEMENT

25 ವರ್ಷಗಳ ಹಿಂದೆ | ಬುಧವಾರ, 19 ನವೆಂಬರ್‌ 1997

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 20:53 IST
Last Updated 18 ನವೆಂಬರ್ 2022, 20:53 IST
   

ದೆಹಲಿ: ಯಮುನಾ ನದಿಗೆ ಬಸ್‌ ಉರುಳಿ 30 ಶಾಲಾ ಮಕ್ಕಳ ಸಾವು
ನವದೆಹಲಿ, ನವೆಂಬರ್‌ 18–
ಶಾಲಾ ಬಸ್ಸೊಂದು ಸೇತುವೆ ದಾಟುತ್ತಿದ್ದಾಗ ಆಯ ತಪ್ಪಿ ನದಿಗೆ ಉರುಳಿದ್ದರಿಂದ ಸುಮಾರು 30 ಮಕ್ಕಳು ನೀರುಪಾಲಾದ ದುರಂತ ಇಂದು ಬೆಳಿಗ್ಗೆ ರಾಜಧಾನಿಯಲ್ಲಿ ಸಂಭವಿಸಿದೆ.

120ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಹೊತ್ತು ಸಾಗುತ್ತಿದ್ದ ಬಸ್‌ ವಜೀರಾಬಾದ್‌ ಸೇತುವೆ ದಾಟುವಾಗ ಆಯ ತಪ್ಪಿ ಯಮುನಾ ನದಿಗೆ ಉರುಳಿತು. ಎತ್ತರದ ಸೇತುವೆಯ ಮೇಲಿನಿಂದ ಬಸ್‌ ತಲೆಕೆಳಗಾಗಿ ನೀರಿಗೆ ಅಪ್ಪಳಿಸಿದ ರಭಸಕ್ಕೆ 30 ಪುಟ್ಟ ಮಕ್ಕಳು ಬಲಿಯಾದರು. ಕನಿಷ್ಠ 70 ಮಕ್ಕಳು ಗಾಯಗೊಂಡಿದ್ದಾರೆ.

ರಂಗಕ್ಕೆ ಬೆಂಬಲ ವಾಪಸು:ಕಾಂಗ್ರೆಸ್‌ನಲ್ಲಿ ಒಮ್ಮತ
ನವದೆಹಲಿ, ನವೆಂಬರ್ 18–
ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳ ಕಾಂಗ್ರೆಸ್‌ ಸಂಸತ್‌ ಸದಸ್ಯರೆಲ್ಲ, ಸಂಯುಕ್ತ ರಂಗ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳಬೇಕು, ರಾಜೀವ್‌ ಹತ್ಯೆ ಪ್ರಕರಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಪಕ್ಷದ ವರಿಷ್ಠರಿಗೆ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಇಂದು ನೀಡಿದ್ದಾರೆ.

ADVERTISEMENT

ಈ ಹಿನ್ನೆಲೆಯಲ್ಲಿ ಐ.ಕೆ. ಗುಜ್ರಾಲ್‌ ನೇತೃತ್ವದ ಸಂಯುಕ್ತ ರಂಗದ ಏಳು ತಿಂಗಳ ಸರ್ಕಾರವು ತೀವ್ರ ಬಿಕ್ಕಟ್ಟಿಗೆ ಸಿಕ್ಕಿದೆ. ಅದರ ಅಸ್ಥಿರತೆಯ ಶಂಕೆ ಹೆಚ್ಚಾಗುತ್ತಿದ್ದು, ಅದರ ಉಳಿವಿನ ಸ್ಥಿತಿ ಡೋಲಾಯಮಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.