ರಾಷ್ಟ್ರೀಯ ಕೃಷಿ ಬೆಳೆ ವಿಮಾ ಯೋಜನೆ ಜಾರಿ
ತುಮಕೂರು, ಮೇ 24– ಪ್ರಸ್ತಕ ಮುಂಗಾರು ಹಂಗಾಮಿನಿಂದ ರಾಷ್ಟ್ರೀಯ ಕೃಷಿ ಬೆಳೆ ವಿಮಾ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಯೋಜನೆಯನ್ನು ಇಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಕೃಷಿ ಸಚಿವ ಟಿ.ಬಿ.ಜಯಚಂದ್ರ ಅವರು, ‘ಈ ವರ್ಷ ವಿಮೆ ವ್ಯಾಪ್ತಿಗೆ ಒಳಪಡುವ ರೈತರು ಜುಲೈ ತಿಂಗಳ ಒಳಗಾಗಿ ವಿಮಾಕಂತು ಪಾವತಿಸಬೇಕಿದೆ’ ಎಂದರು.
ಏಕದಳ ಧಾನ್ಯಗಳಾದ ಭತ್ತ, ಜೋಳ, ರಾಗಿ, ಸಜ್ಜೆ. ದ್ವಿದಳ ಧಾನ್ಯಗಳಾದ ತೊಗರಿ, ಹೆಸರು, ಉದ್ದು ಮತ್ತು ಸೋಯಾ, ಅವರೆ ಹಾಗೂ ಎಣ್ಣೆಕಾಳುಗಳಾದ ನೆಲಕಡಲೆ ಹೊಸ ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.