ADVERTISEMENT

25 ವರ್ಷಗಳ ಹಿಂದೆ: ಗುರುವಾರ, 1–2–1996

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 19:30 IST
Last Updated 31 ಜನವರಿ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಲಂಕಾ ಸೆಂಟ್ರಲ್‌ ಬ್ಯಾಂಕ್‌ಗೆ ಬಾಂಬ್‌ ದಾಳಿ: 200 ಜನ ಬಲಿ

ಕೊಲಂಬೊ, ಜ. 31– (ಪಿಟಿಐ, ಯುಎನ್‌ಐ)– ಭಾರೀ ಸ್ಫೋಟಕಗಳನ್ನು ತುಂಬಿದ್ದ ಲಾರಿಯೊಂದನ್ನು ರಾಜಧಾನಿಯ ಜನನಿಬಿಡ ಬಂದರು ಪ್ರದೇಶದಲ್ಲಿರುವ ಹನ್ನೆರಡು ಅಂತಸ್ತಿನ ಸೆಂಟ್ರಲ್‌ (ರಿಸರ್ವ್‌) ಬ್ಯಾಂಕ್‌ ಕಟ್ಟಡಕ್ಕೆ ಇಂದು ನುಗ್ಗಿಸಿದ ಎಲ್‌ಟಿಟಿಇ ಆತ್ಮಾಹುತಿ ದಳದ ಉಗ್ರಗಾಮಿಗಳು, ಕಟ್ಟಡವನ್ನು ಸ್ಫೋಟಿಸಿದಾಗ ಸುಮಾರು 200 ಜನರು ಸತ್ತು, ಇತರ 1,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಶ್ರೀಲಂಕಾದ ರಾಷ್ಟ್ರಾಧ್ಯಕ್ಷರ ಕಚೇರಿಯ ಕೇವಲ 150 ಮೀಟರ್‌ ದೂರದಲ್ಲೇ ಇಂದು ಬೆಳಿಗ್ಗೆ ಈ ಭೀಕರ ದುಷ್ಕೃತ್ಯ ನಡೆದಿದೆ. ಸ್ಫೋಟದಿಂದ ಸೆಂಟ್ರಲ್‌ ಬ್ಯಾಂಕಿನ ಮುಂಭಾಗ ಪೂರ್ಣ ಕುಸಿದಿದ್ದು, ಭುಗಿಲೆದ್ದ ಭಾರೀ ಬೆಂಕಿ ಸಮೀಪದ ಆರಕ್ಕೂ ಹೆಚ್ಚು ಕಟ್ಟಡಗಳಿಗೆ ವ್ಯಾಪಿಸಿತು.

ADVERTISEMENT

ಪ್ರೊ. ನಂಜುಂಡಸ್ವಾಮಿ ಬಂಧನ ಸಂಭವ

ಬೆಂಗಳೂರು, ಜ. 31– ಬ್ರಿಗೇಡ್‌ ರಸ್ತೆಯಲ್ಲಿರುವ ಬಹು ರಾಷ್ಟ್ರೀಯ ಸಂಸ್ಥೆಗೆ ಸೇರಿದ ಕೆಂಟಕಿ ಫ್ರೈಡ್‌ ಚಿಕನ್‌ (ಕೆಎಫ್‌ಸಿ) ಮಳಿಗೆಯ ಮೇಲೆ ಮಂಗಳವಾರ ಮಧ್ಯಾಹ್ನ ನಡೆದ ರೈತರ ದಾಳಿಯ ಸಂಬಂಧ ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರನ್ನು ಬಂಧಿಸುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.