ADVERTISEMENT

25 ವರ್ಷಗಳ ಹಿಂದೆ: ಗುರುವಾರ, 15 ಫೆ.1996

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 19:19 IST
Last Updated 14 ಫೆಬ್ರುವರಿ 2021, 19:19 IST
   

ಹವಾಲ: ಸಿಬಿಐ ಆರೋಪಪರಿಗಣಿಸದಿರಲು ನ್ಯಾಯಾಲಯಕ್ಕೆ ಅಡ್ವಾಣಿ ಮನವಿ

ನವದೆಹಲಿ, ಫೆ. 14 (ಯುಎನ್‌ಐ)– ಹವಾಲ ಹಗರಣದಲ್ಲಿ ತಮ್ಮವಿರುದ್ಧ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿ ‘ಸತ್ಯಕ್ಕೆ ದೂರ ಮತ್ತು ರಾಜಕೀಯಪ್ರೇರಿತ’ ಎಂದು ಪ್ರತಿಪಾದಿಸಿರುವ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಎಲ್.ಕೆ.ಅಡ್ವಾಣಿ ಅವರು, ಅದನ್ನು ಪರಿಗಣಿಸಬಾರದೆಂದು ವಿಶೇಷ ನ್ಯಾಯಾಲಯಕ್ಕೆಮನವಿ ಮಾಡಿಕೊಂಡಿದ್ದಾರೆ.

ತಮ್ಮ ವಿರುದ್ಧ ಸುಮಾರು ಒಂದು ತಿಂಗಳ ಹಿಂದೆ ಸಲ್ಲಿಸಲಾದ ಆರೋಪಪಟ್ಟಿ ದುರುದ್ದೇಶಪೂರಿತ ಮತ್ತು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮಹೆಸರಿಗೆ ಮಸಿ ಬಳಿಯುವ ಪ್ರಯತ್ನಎಂದು ಅಡ್ವಾಣಿ ಅರ್ಜಿಯಲ್ಲಿಹೇಳಿದ್ದಾರೆ.

ADVERTISEMENT

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕಾರ ಯಾವುದೇ ಅಕ್ರಮ ನಡೆಸಿರುವುದನ್ನು ಆರೋ‍ಪ ಪಟ್ಟಿ ದೃಢಪಡಿಸಿಲ್ಲವೆಂದು ಅವರು ಹೇಳಿದ್ದಾರೆ.

ಅಣ್ವಸ್ತ್ರ ನಿಷೇಧ: ಒತ್ತಡಕ್ಕೆ ಭಾರತ ಮಣಿಯದು– ಚವಾಣ್ ಸ್ಪಷ್ಟನೆ

ಬೆಂಗಳೂರು, ಫೆ. 14– ಅಮೆರಿಕವು ಭಾರತಕ್ಕೊಂದು ಪಾಕ್‌ಗೊಂದು‘ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ ನೀತಿ’ಯನ್ನು ಅನುಸರಿಸುತ್ತಿದೆ. ಅಮೆರಿಕದ ಒತ್ತಡಕ್ಕೆ ಮಣಿದು ಖಾಲಿ ಹಾಳೆಯ ಮೇಲೆ ಅಣ್ವಸ್ತ್ರ ನಿಷೇಧ ನೀತಿಗೆ ಸಹಿ ಮಾಡಲು ಭಾರತ ಸಿದ್ಧವಿಲ್ಲ ಎಂದು ಕೇಂದ್ರ ಗೃಹ ಖಾತೆ ಸಚಿವ ಎಸ್‌.ಬಿ.ಚವಾಣ್ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ಸದ್ಯದಲ್ಲಿಯೇ ಬರಲಿರುವ ಲೋಕಸಭಾ ಚುನಾವಣೆಗಾಗಿ ಕಾರ್ಯಕರ್ತರನ್ನು ಸಜ್ಜುಗೊಳಿಸಲು ನಗರದಲ್ಲಿ ನಡೆದ ರಾಜ್ಯ ಮಟ್ಟದ ಕಾಂಗೈ ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಮೆರಿಕದಭಾರತ ವಿರೋಧಿ ಧೋರಣೆಯನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.