ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ 16.4.1996

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 19:30 IST
Last Updated 15 ಏಪ್ರಿಲ್ 2021, 19:30 IST
   

ಅಭ್ಯರ್ಥಿಗಳು ಕೇಳಿದರೆರಕ್ಷಣೆಗೆ ಸೂಚನೆ

ಬೆಂಗಳೂರು, ಏ. 15– ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರೇ ತಮಗೆ ರಕ್ಷಣೆ ಒದಗಿಸಬೇಕು ಎಂದು ಕೇಳಿದರೂ ಅಂಥವರಿಗೆ ರಕ್ಷಣೆ ಕೊಡಲು ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ. ಆದರೆ, ಈವರೆವಿಗೆ ಇಂತಹ ಯಾವ ಮನವಿಗಳೂ ಬಂದಿಲ್ಲ ಎಂದು ಮುಖ್ಯಮಂತ್ರಿ
ಎಚ್‌.ಡಿ.ದೇವೇಗೌಡ ಅವರು ಇಂದುಇಲ್ಲಿ ತಿಳಿಸಿದರು.

ಭಟ್ಕಳ ಕ್ಷೇತ್ರದ ಬಿಜೆಪಿ ಶಾಸಕಡಾ. ಯು.ಚಿತ್ತರಂಜನ್ ಅವರ ಕಗ್ಗೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ರಾಜ್ಯ ಸಚಿವ ಸಂಪುಟ ಇಂದು ತನ್ನ ಒಪ್ಪಿಗೆಯನ್ನು ನೀಡಿದೆ ಎಂದು ಅವರು ಹೇಳಿದರು.

ADVERTISEMENT

ಭ್ರಷ್ಟಾಚಾರ ನಿರ್ಮೂಲನೆಗೆ8 ಅಂಶದ ಕಾರ್ಯಕ್ರಮ

ನವದಹೆಲಿ, ಏ. 15 (ಯುಎನ್ಐ)– ಸಾರ್ವಜನಿಕ ಜೀವನದಿಂದ ಭ್ರಷ್ಟಾಚಾರದ ನಿರ್ಮೂಲನಕ್ಕೆ ಎಂಟು ಅಂಶಗಳ ಸಮಗ್ರ ಕಾರ್ಯಕ್ರಮ, ಕೇಂದ್ರೀಯ ತನಿಖಾ ಸಂಸ್ಥೆಯನ್ನು (ಸಿಬಿಐ) ಸರ್ಕಾರಿ ಹತೋಟಿಯಿಂದ ಮುಕ್ತಗೊಳಿಸಿ ಸ್ವಾಯತ್ತ ತನಿಖಾ ವ್ಯವಸ್ಥೆಯಾಗಿ ಮಾರ್ಪಡಿಸುವುದು, ಸಮಗ್ರ ಬೆಳೆ ವಿಮಾ ಯೋಜನೆ, ಕೃಷಿ ಉತ್ಪನ್ನ ಸಾಗಣೆ ಮೇಲಿನ ನಿಯಂತ್ರಣ ರದ್ದು. ಇವು, ಜನತಾದಳ ಇಂದು ಬಿಡು ಗಡೆ ಮಾಡಿದ ಲೋಕಸಭಾ ಚುನಾವಣಾ ಪ್ರಣಾಳಿಕೆಯ ಮುಖ್ಯ ಅಂಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.