ADVERTISEMENT

25 ವರ್ಷಗಳ ಹಿಂದೆ: ಶನಿವಾರ 27.4.1996

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 20:37 IST
Last Updated 26 ಏಪ್ರಿಲ್ 2021, 20:37 IST
   

16 ಕೋಟಿ ಮತದಾರರಿಂದ ಇಂದು ತೀರ್ಮಾನ
ನವದೆಹಲಿ, ಏ. 26 (ಪಿಟಿಐ)–
ದೆಹಲಿ ಯಲ್ಲಿ ಹೊಸ ಸರ್ಕಾರ ಅಧಿಕಾರ ಹಿಡಿ ಯಲು ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿದ್ದು, ನಾಳೆ ನಡೆಯಲಿರುವ ಪ್ರಥಮ ಹಂತದ ಚುನಾವಣೆಯಲ್ಲಿ 14 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 16 ಕೋಟಿ ಮತದಾರರು 150 ಲೋಕಸಭಾ ಮತ್ತು ಐದು ವಿಧಾನಸಭೆಗಳ 532 ಸ್ಥಾನಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಪ್ರಧಾನಿ ಪಿ.ವಿ.ನರಸಿಂಹ ರಾವ್, ಮಾಜಿ ಉಪಪ್ರಧಾನಿ ದೇವಿಲಾಲ್, ಕೇಂದ್ರ ಸಚಿವರುಗಳಾದ ಕೆ.ಕರುಣಾಕರನ್, ಶೆಲ್ಜಾ, ಪಿ.ಜೆ.ಕುರಿಯನ್, ಎಸ್.ಕೃಷ್ಣಕುಮಾರ್, ಜನತಾ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ, ತಮಿಳು ಮಾನಿಲ ಕಾಂಗ್ರೆಸ್‌ನ ಪಿ.ಚಿದಂಬರಂ, ಬಹುಜನ ಸಮಾಜ ಪಕ್ಷದ ನಾಯಕ ಕಾನ್ಶಿರಾಮ್, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಎಸ್.ಬಂಗಾರಪ್ಪ ಮುಂತಾದ ಪ್ರಮುಖ ರಾಜಕಾರಣಿಗಳ ರಾಜಕೀಯ ಭವಿಷ್ಯವನ್ನು ಈ ಮೊದಲ ಹಂತದ ಚುನಾವಣೆ ನಿರ್ಧರಿಸಲಿದೆ.

ಸಂಜಯ್ ದತ್‌ ದೋಷಮುಕ್ತ
ದಾಂಡೇಲಿ, ಏ. 26–
ಸಿನಿಮಾ ನಟ ಸಂಜಯ್ ದತ್‌ ಮತ್ತು ಇತರ ನಾಲ್ವರ ಮೇಲಿನ ಆರೋಪಗಳಿಗೆ ಪೂರಕವಾಗಿ ಪ್ರಾಸಿಕ್ಯೂಷನ್ ಸಾಕ್ಷ್ಯ ಒದಗಿಸುವಲ್ಲಿ ವಿಫಲವಾದ ಕಾರಣ, ಇಲ್ಲಿನ ಪ್ರಥಮ ದರ್ಜೆ ನ್ಯಾಯಾಲಯ ಅವರನ್ನು ಆರೋಪಮುಕ್ತಗೊಳಿಸಿದೆ.

ADVERTISEMENT

ನಟ ಸಂಜಯ್ ದತ್ ಅವರು ಕಳೆದ 1991ರಲ್ಲಿ ದಾಂಡೇಲಿ ಅಭಯಾರಣ್ಯಕ್ಕೆ ಅಕ್ರಮ ಪ್ರವೇಶಿಸಿ, ಕಳ್ಳತನದಿಂದ ಬೇಟೆಯಾಡಿ, ಮಂದುರ್ಲಿ ಅರಣ್ಯ ಇಲಾಖೆಯ ವಿಶ್ರಾಂತಿ ಗೃಹದ ಬಾಗಿಲು ಮುರಿದು, ಸರ್ಕಾರಿ ಆಸ್ತಿಗೆ ಹಾನಿಯುಂಟು ಮಾಡಿದ್ದಾರೆ ಎಂದು ಆಪಾದಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.