ADVERTISEMENT

25 ವರ್ಷದ ಹಿಂದೆ | ಸೀತಾಳ ಮೈಮರೆವು; ಮರಿ ನೀರಾನೆ ಸಾವು

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 23:42 IST
Last Updated 25 ಜೂನ್ 2025, 23:42 IST
   

ಸೀತಾಳ ಮೈಮರೆವು; ಮರಿ ನೀರಾನೆ ಸಾವು

ಬೆಂಗಳೂರು, ಜೂನ್‌ 25– ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಇತ್ತೀಚೆಗಷ್ಟೆ ಜನಿಸಿದ್ದ ನೀರಾನೆ ಮರಿ ಶನಿವಾರ ಬೆಳಗಿನ ಜಾವ ಮೃತಪಟ್ಟಿದೆ.

ನೀರಾನೆ ಮರಿಯ ತಾಯಿ ಸೀತಾಳ ಮೈಮರೆವು ಮರಿಯ ಸಾವಿಗೆ ಕಾರಣ ಇರಬಹುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣಪ್ಪ ಅವರು ಇಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ಸೀತಾಳೇ ತನ್ನ ಮರಿ ಮೇಲೆ ಗೊತ್ತಿಲ್ಲದೆ ಬಿದ್ದಾಗ ಅದಕ್ಕೆ ಉಸಿರಾಟದ ತೊಂದರೆಯಾಗಿ ಅದರ ಯಕೃತ್ತು ಒಡೆದಿರುವ ಸಾಧ್ಯತೆ ಇದೆ’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.