25 ವರ್ಷದ ಹಿಂದೆ
ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಚುನಾವಣಾ ಪ್ರಚಾರ ನಿಷೇಧ
ನವದೆಹಲಿ, ಆ. 20– ಯಾವುದೇ ರಾಜಕೀಯ ಪಕ್ಷವು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವುದನ್ನು ಅಥವಾ ಜಾಹೀರಾತು ನೀಡುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ.
ಆದರೆ ದೂರದರ್ಶನದಲ್ಲಿ ಎಲ್ಲ ರಾಷ್ಟ್ರೀಯ ಪಕ್ಷಗಳಿಗೂ ನಿಗದಿತ ಸಮಯವನ್ನು ನೀಡುವ ಪದ್ಧತಿ ಮುಂದುವರಿಯಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಆಯೋಗದ ನಿರ್ದೇಶನದ ಪ್ರಕಾರ, ಯಾವುದೇ ಟಿ.ವಿ ಚಾನೆಲ್‌ನಲ್ಲಿ ಕೂಡ ರಾಜಕೀಯ ಪಕ್ಷಗಳು ಚುನಾವಣೆಗೆ ಸಂಬಂಧಿಸಿದ ಜಾಹೀರಾತುಗಳನ್ನು ನೀಡುವಂತಿಲ್ಲ. ಕೆಲ ಪಕ್ಷಗಳಿಗೆ ಮಾತ್ರ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಜಾಹೀರಾತು ನೀಡುವ ಸಾಮರ್ಥ್ಯ ಇರುವುದರಿಂದ ಉಳಿದ ಪಕ್ಷಗಳಿಗೆ ಈ ಅವಕಾಶ ನಿರಾಕರಿಸಿದಂತಾಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
‘ಶೀಘ್ರವೇ ಬೊಫೋರ್ಸ್ ದಾಖಲೆ’
ಚಂಡೀಗಢ, ಆ. 20 (ಪಿಟಿಐ)– ಬೊಫೋರ್ಸ್ ಫಿರಂಗಿ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ಹೇಳಿರುವ ಹಿನ್ನೆಲೆಯಲ್ಲಿ ಇಟಲಿಯ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಜತೆ ತನ್ನ ನಾಯಕರು ಹೊಂದಿರುವ ಸಂಬಂಧವನ್ನು ಕಾಂಗ್ರೆಸ್ ಬಹಿರಂಗ ಪಡಿಸಬೇಕು ಎಂದು ಪ್ರಧಾನಿ ಎ.ಬಿ. ವಾಜಪೇಯಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.