ಪಟೇಲ್ ಸಲಹೆ ತಿರಸ್ಕೃತ; ಇಬ್ಭಾಗ ಸನ್ನಿಹಿತ
ಲೋಕಶಕ್ತಿ, ಸಮತಾ ವಿಲೀನಕ್ಕೆ ಅಸ್ತು; ಎನ್‌ಡಿಎ ಸೇರಲು ದಳ ವಿರೋಧ
ನವದೆಹಲಿ, ಜುಲೈ 20– ಲೋಕಶಕ್ತಿ ಮತ್ತು ಸಮತಾ ಪಕ್ಷವು ಜನತಾದಳದ ಜತೆ ವಿಲೀನವಾಗುವ ನಿರ್ಧಾರಕ್ಕೆ ಇಂದು ನಡೆದ ಮಹತ್ವದ ಜನತಾದಳದ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯು ಒಪ್ಪಿಗೆ ನೀಡಿತಾದರೂ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ(ಎನ್‌ಡಿಎ) ಸೇರುವುದನ್ನು ತಿರಸ್ಕರಿಸಿತು.
ವಿಲೀನದ ನಂತರ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಜತೆ ಹೋಗುವುದಕ್ಕೆ ನಿರೀಕ್ಷೆಯಂತೆ ಮೂವರು ಪರವಾಗಿ ಮತ್ತು ಹನ್ನೊಂದು ಮಂದಿ ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ಬಹುತೇಕವಾಗಿ ದಳವು ಇಬ್ಭಾಗವಾಗುವುದು ಖಚಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.