ADVERTISEMENT

25 ವರ್ಷಗಳ ಹಿಂದೆ | ಕಾಶ್ಮೀರ: ಪಾಕ್‌ ಬೆಂಬಲಿತ 11 ಉಗ್ರರ ಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 19:08 IST
Last Updated 2 ಅಕ್ಟೋಬರ್ 2025, 19:08 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಶ್ರೀನಗರ, ಅ. 2 (ಪಿಟಿಐ)– ಪಾಕಿಸ್ತಾನ ಬೆಂಬಲಿತ ಗಡಿ ಭದ್ರತಾ ಪಡೆಗಳ ವಾಹನವೊಂದನ್ನು ಸ್ಫೋಟಿಸಿದ ಘಟನೆಯಿಂದ ನಡೆದ ಗುಂಡಿನ ಚಕಮಕಿಯಲ್ಲಿ ಹನ್ನೊಂದು ಮಂದಿ ಉಗ್ರಗಾಮಿಗಳು ಸೇರಿ ಹನ್ನೆರಡು ಮಂದಿ ಹತ್ಯೆಗೀಡಾದ ಘಟನೆ ಜಮ್ಮು ಮತ್ತು ಕಾಶ್ಮೀರದ ವಿಭಾಗದಲ್ಲಿ ನಡೆದಿದೆ.

ಜಮ್ಮು ವಿಭಾಗದ ಸುರನ್‌ ಕೋಟೆಯಲ್ಲಿ ಭದ್ರತಾ ಪಡೆಯು ಭಾರೀ ಪ್ರಮಾಣದ ಸ್ಫೋಟಕಗಳನ್ನು ಪತ್ತೆ ಹಚ್ಚುವ ಮೂಲಕ ನಿನ್ನೆ
ಸಂಭವಿಸಬಹುದಾಗಿದ್ದ ಅನಾಹುತವನ್ನು ತಪ್ಪಿಸಿದೆ.

ರೈಲ್ವೆ ಪ್ರಯಾಣ ದರ ಏರಿಕೆ ಸಂಭವ: ದಿಗ್ವಿಜಯ್‌ ಸಿಂಗ್‌

ADVERTISEMENT

ಜೆಮ್‌ಷೆಡ್‌ಪುರ್‌, ಅ. 2 (ಪಿಟಿಐ)‍– ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ರೈಲ್ವೆ ಪ್ರಯಾಣ ದರ ಏರಿಕೆಯ ಸಾಧ್ಯತೆ ಇರುವುದಾಗಿ ರೈಲ್ವೆ ಖಾತೆ ರಾಜ್ಯ ಸಚಿವ ದಿಗ್ವಿಜಯ್ ಸಿಂಗ್ ಇಂದು ಇಲ್ಲಿ ತಿಳಿಸಿದರು.

ಆದರೆ, ಇದು ಸಚಿವ ಸಂಪುಟದ ಒಪ್ಪಿಗೆಯನ್ನು ಆಧರಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಯು ವೈಯಕ್ತಿಕ ವಿಷಯ ಎಂದ ಅವರು, ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.