25 ವರ್ಷಗಳ ಹಿಂದೆ ಈ ದಿನ
ಧ್ವಜಾರೋಹಣ: ಪ್ರತ್ಯೇಕ ರಾಜ್ಯ ಚಳವಳಿಗೆ ಹೊಸ ತಿರುವು
ಹುಬ್ಬಳ್ಳಿ– ಧಾರವಾಡ, ಜೂನ್ 21– ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಯ ಬೇಡಿಕೆಗೆ ಒತ್ತಾಯಿಸಿ ಚಳವಳಿ ನಡೆಸುತ್ತಿರುವ ಧಾರವಾಡದ ವಕೀಲರ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸರ್ಕಾರಿ ಕ್ರೀಡಾಂಗಣದಲ್ಲಿ ಇಂದು ‘ಉತ್ತರ ಕರ್ನಾಟಕ ರಾಜ್ಯ’ದ ಧ್ವಜಾರೋಹಣ ನಡೆಯುವ ಮೂಲಕ ಚಳವಳಿ ಹೊಸ ತಿರುವು ಪಡೆಯಿತು.
ಹುಬ್ಬಳ್ಳಿಯಲ್ಲಿ ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಮೆರವಣಿಗೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.