ADVERTISEMENT

25 ವರ್ಷಗಳ ಹಿಂದೆ: 27-6-1997

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 19:45 IST
Last Updated 26 ಜೂನ್ 2022, 19:45 IST
25 ವರ್ಷಗಳ ಹಿಂದೆ: 27-6-1997
25 ವರ್ಷಗಳ ಹಿಂದೆ: 27-6-1997   

ಕಾವೇರಿ: ಅಧಿಸೂಚನೆ ತಿರಸ್ಕರಿಸಲು ಆಗ್ರಹ

ಬೆಂಗಳೂರು, ಜೂನ್‌ 26– ಕಾವೇರಿ ನೀರು ಹಂಚಿಕೆ ಕುರಿತು ನ್ಯಾಯ ಮಂಡಳಿ ಆದೇಶದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ಕರ್ನಾಟಕದ ಪಾಲಿಗೆ ಕರಾಳವಾಗಿದ್ದು ರಾಜ್ಯ ಸರ್ಕಾರ ಇದನ್ನು ತಿರಸ್ಕರಿಸಬೇಕು ಎಂದು ಕಾಂಗ್ರೆಸ್‌ ಮುಖಂಡರು ಇಂದಿಲ್ಲಿ ಆಗ್ರಹಪಡಿಸಿ ಕೇಂದ್ರದ ಕ್ರಮದ ವಿರುದ್ಧ ಉಗ್ರ ಚಳುವಳಿ ನಡೆಸುವ ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಎಚ್‌.ಕೆ.ಪಾಟೀಲ್‌, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಂಸತ್‌ ಸದಸ್ಯ ಹಾಗೂ ಕೃಷ್ಣಾ–ಕಾವೇರಿ ಸಮನ್ವಯ ವೇದಿಕೆಯ ಮುಖಂಡ ಜಿ. ಮಾದೇಗೌಡ ಅವರು ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ADVERTISEMENT

ರಾಜ್ಯಗಳಿಗೆ ಶೇ.29 ತೆರಿಗೆ ವಾಪಸ್‌

ಅರಿಯಾಲೂರು, ಜೂನ್‌ 26 (ಯುಎನ್‌ಐ)– ಹತ್ತನೇ ಹಣಕಾಸು ಆಯೋಗದ ಶಿಫಾರಸಿನಂತೆ ಪ್ರಸಕ್ತ ಹಣಕಾಸು ವರ್ಷದಿಂದ ಎಲ್ಲ ತೆರಿಗೆಗಳಿಂದ ಸಂಗ್ರಹವಾಗುವ ವರಮಾನದ ಶೇಕಡಾ 29 ರಷ್ಟನ್ನು ರಾಜ್ಯಗಳಿಗೆ ನೀಡಲು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

ಇದು ಜಾರಿಗೆ ಬಂದಿದ್ದೇ ಆದಲ್ಲಿ ರಾಜ್ಯಗಳಿಗೆ ವಾರ್ಷಿಕ ಕೇಂದ್ರ ಸರ್ಕಾರ ನೀಡುವ 40,000 ಕೋಟಿ ರೂಪಾಯಿಗಳಿಗೆ ಮೇಲಾಗಿ ಸುಮಾರು 3,000 ಕೋಟಿ ರೂಪಾಯಿ ದೊರೆಯಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.