ADVERTISEMENT

25 ವರ್ಷಗಳ ಹಿಂದೆ ಈ ದಿನ: ಅಮರನಾಥ ಹತ್ಯೆ: ನ್ಯಾಯಾಂಗ ತನಿಖೆ ಬೇಡಿಕೆ ತಿರಸ್ಕಾರ

ಪ್ರಜಾವಾಣಿ ವಿಶೇಷ
Published 22 ಆಗಸ್ಟ್ 2025, 19:43 IST
Last Updated 22 ಆಗಸ್ಟ್ 2025, 19:43 IST
<div class="paragraphs"><p>25 ವರ್ಷಗಳ ಹಿಂದೆ ಈ ದಿನ</p></div>

25 ವರ್ಷಗಳ ಹಿಂದೆ ಈ ದಿನ

   

ಅಮರನಾಥ ಹತ್ಯೆ: ನ್ಯಾಯಾಂಗ ತನಿಖೆ ಬೇಡಿಕೆ ತಿರಸ್ಕಾರ

ನವದೆಹಲಿ, ಆಗಸ್ಟ್‌ 22– ಕಾಶ್ಮೀರದಲ್ಲಿ ನಡೆದ ಅಮರನಾಥ ಯಾತ್ರಿಗಳ ಹತ್ಯಾಕಾಂಡದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂಬ ಕಾಂಗ್ರೆಸ್‌ ಪಕ್ಷದ ಬೇಡಿಕೆಯನ್ನು ಇಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತಿರಸ್ಕರಿಸಿತು.

ADVERTISEMENT

ಘಟನೆಯ ತನಿಖೆಗೆ ನೇಮಿಸಲಾದ ಮೂವರು ಉನ್ನತ ಅಧಿಕಾರಿಗಳ ಸಮಿತಿ, ಹತ್ಯಾಕಾಂಡಕ್ಕೆ ಭದ್ರತಾ ವೈಫಲ್ಯ ಕಾರಣ ಎಂದು ಹೇಳಿದರೆ, ಕಾಂಗ್ರೆಸ್ ಬೇಡಿಕೆಯನ್ನು ಪುನರ್‌ ಪರಿಶೀಲಿಸಲಾಗುವುದು ಎಂಬ ಅಭಿಪ್ರಾಯವನ್ನು ಸರ್ಕಾರ ಪುನರುಚ್ಚರಿಸಿತು.

ಕೊಡಗಿನಲ್ಲಿ ಮಳೆ; ಮೈದುಂಬಿದ ಕಾವೇರಿ

ಮಡಿಕೇರಿ, ಆಗಸ್ಟ್‌ 22– ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಬಲಮುರಿ ಬಳಿ ಕಾವೇರಿ ನದಿ ಹಳೇ ಸೇತುವೆಯ ಮೇಲೆ ಮೂರು ಅಡಿಯಷ್ಟು ಎತ್ತರದಲ್ಲಿ ಹರಿಯುತ್ತಿದೆ.

ಕಾವೇರಿ ಜಲಾನಯನ ಪ್ರದೇಶವಾದ ಭಾಗಮಂಡಲದಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದರೂ ಮಳೆ ಬಿಟ್ಟು ಬಿಟ್ಟು ಬರುತ್ತಿರುವುದರಿಂದ ಇದುವರೆಗೆ ಆ ಭಾಗದ ಸಂಚಾರಕ್ಕೆ ತೊಡಕಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.