
ಪ್ರಜಾವಾಣಿ ವಿಶೇಷ
25 ವರ್ಷಗಳ ಹಿಂದೆ ಈ ದಿನ
ಕನ್ನಡದಲ್ಲಿ ಕಲಿತವರಿಗೆ ಆದ್ಯತೆ: ಈ ತಿಂಗಳು ಸುತ್ತೋಲೆ
ಬೆಂಗಳೂರು. ಜ.10– ‘ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳಿಗೆ ಉನ್ನತ ಮತ್ತು ವಿವಿಧ ವೃತ್ತಿ ಶುಕ್ಷಣ ತರಗತಿಗಳಲ್ಲಿ ಆದ್ಯತೆ ಮೇಲೆ ಪ್ರವೇಶ ನೀಡಲು ಅವಕಾಶವಾಗುವಂತೆ ಈ ತಿಂಗಳ ಕೊನೆಯೊಳಗೆ ಸುತ್ತೋಲೆ ಹೊರಡಿಸಲಾಗುವುದು’ ಎಂದು ಮುಖ್ಯಮಂತ್ರಿ ಕೃಷ್ಣ ಇಂದು ಇಲ್ಲಿ ಹೇಳಿದರು.
ಉರ್ದು, ತಮಿಳು, ತೆಲುಗು ಸೇರಿದಂತೆ ಇತರ ಶಾಲೆಗಳಲ್ಲಿ ಖಾಲಿ ಇರುವ ಕನ್ನಡ ಶಿಕ್ಷಕರ ಹುದ್ದೆಗೆ ಕೂಡಲೇ ಗುತ್ತಿಗೆ ಆಧಾರದಲ್ಲಿ ಅಭ್ಯರ್ಥಿಗಳ ನೇಮಕ ಮಾಡುವಂತೆಯೂ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.