ADVERTISEMENT

25 ವರ್ಷಗಳ ಹಿಂದೆ ಈ ದಿನ: ನೈರುತ್ಯ ರೈಲ್ವೆ ವಲಯ; ಹೈಕೋರ್ಟ್‌ ಆಜ್ಞೆಗೆ ತಡೆ

ಪ್ರಜಾವಾಣಿ ವಿಶೇಷ
Published 18 ಆಗಸ್ಟ್ 2025, 19:17 IST
Last Updated 18 ಆಗಸ್ಟ್ 2025, 19:17 IST
<div class="paragraphs"><p>25 ವರ್ಷಗಳ ಹಿಂದೆ&nbsp;ಈ ದಿನ</p></div>

25 ವರ್ಷಗಳ ಹಿಂದೆ ಈ ದಿನ

   

ವಿಷದ ಕಾಯಿ ತಿಂದು 29 ಶಾಲಾ ಮಕ್ಕಳು ಅಸ್ವಸ್ಥ

ಕೆ.ಜಿ.ಎಫ್‌., ಆಗಸ್ಟ್‌ 18– ಶಾಲಾ ಆವರಣದಲ್ಲಿ ಬೆಳೆದಿದ್ದ ವಿಷದ ಕಾಯಿ ತಿಂದು ಇಲ್ಲಿಗೆ ಸಮೀಪದ ಎಂ.ಆರ್‌. ಕುತ್ತೂರಿನಲ್ಲಿ ಪ್ರಾಥಮಿಕ ಶಾಲೆಯ 20 ಮಕ್ಕಳು ಇಂದು ಅಸ್ವಸ್ಥರಾದರು.

ADVERTISEMENT

ಸಂಜೆ 4 ಗಂಟೆಗೆ ಶಾಲೆ ಬಿಟ್ಟಾಗ ಮೊದಲು ಈ ಕಾಯಿ ತಿಂದ ಬಾಲಕ ಇತರರನ್ನೂ ತಿನ್ನುವಂತೆ ಪ್ರೇರೇಪಿಸಿದ. ನಂತರ ಕಾಯಿ ತಿಂದ ಆರರಿಂದ ಹನ್ನೊಂದು ವರ್ಷದೊಳಗಿನ 15 ಬಾಲಕಿಯರು ಹಾಗೂ 14 ಬಾಲಕರು ವಾಂತಿ ಮಾಡಿಕೊಳ್ಳಲು ಶುರು ಮಾಡಿದರು. ಕೂಡಲೇ, ಅವರನ್ನು ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದು, ಅವರೆಲ್ಲಾ ಈಗ ಗುಣಮುಖರಾಗುತ್ತಿದ್ದಾರೆ.

ನೈರುತ್ಯ ರೈಲ್ವೆ ವಲಯ: ಹೈಕೋರ್ಟ್‌ ಆಜ್ಞೆಗೆ ತಡೆ

ನವದೆಹಲಿ, ಆಗಸ್ಟ್‌ 18– ನೈರುತ್ಯ ರೈಲ್ವೆ ವಲಯವನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಬಾರದೆಂದು ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ನೀಡಿ, ಮೇಲ್ಮನವಿಯನ್ನು ವಿಚಾರಣೆಗೆ ಸ್ವೀಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.