ADVERTISEMENT

25 ವರ್ಷಗಳ ಹಿಂದೆ | ಕಾರಿಡಾರ್ ಯೋಜನೆ ಸಭೆ: ಗಲಭೆ, ಲಾಠಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 1:27 IST
Last Updated 4 ಜುಲೈ 2025, 1:27 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಮಂಡ್ಯ, ಜುಲೈ 3– ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್‌ ಹೆದ್ದಾರಿ (ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್‌) ಯೋಜನೆಗೆ ಸಂಬಂಧಿಸಿ ಸಾರ್ವಜನಿಕರ ಅಭಿಪ್ರಾಯ ಪಡೆಯಲು ಜಿಲ್ಲಾಡಳಿತದಿಂದ ಇಂದು ಇಲ್ಲಿನ ರೈತ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿ, ಬಿಗುವಿನ ವಾತಾವರಣದಲ್ಲಿ ಘೋಷಣೆ, ಧಿಕ್ಕಾರ, ಗಲಭೆ, ಘರ್ಷಣೆ, ಲಘು ಲಾಠಿ ಪ್ರಹಾರ, ಬ್ಯಾನರ್ ಹರಿತ, ಸಭಾತ್ಯಾಗ ಮುಂತಾದ ಘಟನೆಗಳು ನಡೆದವು.

ಕೆಎಟಿಗೆ ಮರುಜೀವ ತುಂಬಲು ಸರ್ಕಾರದ ಕ್ರಮ

ಬೆಂಗಳೂರು, ಜುಲೈ 3– ರಾಜ್ಯದ ಸಿಬ್ಬಂದಿಯ ಸೇವಾ ವಿಷಯದ ವಿವಾದಗಳನ್ನು ಬಗೆಹರಿಸುವುದಕ್ಕೆ ಸಂಬಂಧಿಸಿದ ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ (ಕೆಎಟಿ) ಮತ್ತೆ ಜೀವ ತುಂಬಿ ಅದು ಪೂರ್ಣ ಮಟ್ಟದಲ್ಲಿ ಕಾರ್ಯ ನಿರ್ವಹಿಸುವಂತಾಗುವ ಕಾಲ ಸನ್ನಿಹಿತವಾಗಿದೆ.

ADVERTISEMENT

ನ್ಯಾಯಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಹೈಕೋರ್ಟಿನ ಇಬ್ಬರು ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.