ನವದೆಹಲಿ, ಜುಲೈ 4– ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ರಾಜ್ಯಕ್ಕೆ ಹೆಚ್ಚು ಸ್ವಾಯತ್ತತೆ ಕೋರಿ ಅಂಗೀಕರಿಸಿದ್ದ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಇಂದು ಸಾರಾಸಗಟಾಗಿ ತಿರಸ್ಕರಿಸಿತು.
ಆಯ್ದ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದಂತೆ ಕೇಂದ್ರ ಸರ್ಕಾರದ ಅಧಿಕಾರವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಈ ಸ್ವಾಯತ್ತತೆಯ ನಿರ್ಣಯದಿಂದ ‘ಇತಿಹಾಸದ ಕಾಲಚಕ್ರವನ್ನು ಹಿಂದಕ್ಕೆ ಸರಿಸದಂತಾಗುವುದು’ ಮಾತ್ರವಲ್ಲ ಅದರಿಂದಾಗಿ ರಾಷ್ಟ್ರೀಯ ಹಿತಾಸಕ್ತಿಯ ವಿರುದ್ಧದ ಚರ್ಚೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಸಚಿವ ಸಂಪುಟ ಅಭಿಪ್ರಾಯಪಟ್ಟಿತು.
ಶಾಲಾ ವೇಳೆ ಬದಲಾವಣೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ಬೆಂಗಳೂರು, ಜುಲೈ 4– ಹೊಸ ಶಾಲಾ ವೇಳೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಶಾಲೆಗಳ ಬಂದ್ ಕರೆಗೆ ಬಿಜೆಪಿ ನೀಡಿದ್ದ ಕರೆಗೆ ರಾಜ್ಯದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.