ತುಮಕೂರು ಬಳಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ
ತುಮಕೂರು, ಜೂನ್ 26 – ಊರಿನ ದಲಿತರ ಸಮಾಜಿಕ ಬಹಿಷ್ಕಾರಕ್ಕೆ ಒಂದು ಜನಾಂಗ ‘ಕಟ್ಟು’ ವಿಧಿಸಿರುವ ಹಿನ್ನೆಲೆಯಲ್ಲಿ ಕೆ.ಪಾಲಸಂದ್ರ ಗ್ರಾಮದಲ್ಲಿ ಎರಡು ಜನಾಂಗಗಳ ನಡುವೆ ದ್ವೇಷದ ಜ್ವಾಲೆ ಬೂದಿಮುಚ್ಚಿದ ಕೆಂಡದಂತೆ ಒಳಗೊಳಗೇ ಕುದಿಯುತ್ತಿದೆ.
‘ಊರಿನ ಜನ ಯಾವುದೇ ಕೆಲಸ ಕಾರ್ಯಕ್ಕೆ ಮಾದಿಗರನ್ನು ಕರೆಯಬಾರದು. ಅವರ ಜೊತೆ ಮಾತನಾಡಬಾರದು. ದಲಿತರು ನಮ್ಮ ಕಡೆ ಕಾಲಿಡಬಾರದು. ಇದನ್ನು ಉಲ್ಲಂಘಿಸಿದವರಿಗೆ 101 ರುಪಾಯಿ ದಂಡ ವಿಧಿಸಲಾಗುವುದು’ ಎಂದು ಊರಿನ ತಿಗಳ ಜನಾಂಗದ ಮುಖಂಡರು ಸ್ಥಳೀಯರ ಮೇಲೆ ‘ಕಟ್ಟು’ ವಿಧಿಸಿದ್ದಾರೆ.
ಮಂಕು ಬೆಡಗಿಯರು
ಲಂಡನ್, ಜೂನ್ 26(ಡಿಪಿಎ)– ಬಿಕಿನಿ ತೊಡುವ ಬೆಡಗಿಯರು ಸಾಮಾನ್ಯವಾಗಿ ಮಂಕಾಗಿರುತ್ತಾರೆ. ಬುದ್ಧಿವಂತ ಮಹಿಳೆಯರು ಬಿಕಿನಿ ತೊಟ್ಟರೆ ಇನ್ನಷ್ಟು ಮಂಕಾಗುತ್ತಾರೆ ಎಂದು ಇಲ್ಲಿನ ವಿಶ್ವವಿದ್ಯಾಲಯದ ಮನೋವಿಜ್ಞಾನಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.