ADVERTISEMENT

25 ವರ್ಷಗಳ ಹಿಂದೆ: ಕ್ವಟ್ರೋಚಿ ಬಂಧನ ವಾರಂಟ್‌ಗೆ ದೆಹಲಿ ಹೈಕೋರ್ಟ್‌ ಅಸ್ತು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 23:20 IST
Last Updated 5 ಆಗಸ್ಟ್ 2023, 23:20 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಕ್ವಟ್ರೋಚಿ ಬಂಧನ ವಾರಂಟ್‌ಗೆ ದೆಹಲಿ ಹೈಕೋರ್ಟ್‌ ಅಸ್ತು

ನವದೆಹಲಿ, ಆ. 5 (ಯುಎನ್‌ಐ)– ಇಟಲಿಯ ಉದ್ಯಮಿ ಒಟಾವಿಯೋ ಕ್ವಟ್ರೋಚಿ ಅವರ ಮೇಲಿನ ಆರೋಪವನ್ನು ಮೇಲ್ನೋಟದಲ್ಲೇ ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂಬ ಸಿಬಿಐ ವಾದವನ್ನು ದೆಹಲಿ ಹೈಕೋರ್ಟ್‌ ಪುರಸ್ಕರಿಸುವುದರೊಂದಿಗೆ ಅವರ ಬಂಧನಕ್ಕಿದ್ದ ಎಲ್ಲ ಎಲ್ಲ ಡೆ– ತಡೆಗಳು ನಿವಾರಣೆ ಆದಂತಾಗಿದೆ.

ಬೋಫೋರ್ಸ್‌ ಫಿರಂಗಿ ವ್ಯವಹಾರದಲ್ಲಿ ಕ್ವಟ್ರೋಚಿ 7.34 ದಶಲಕ್ಷ ಡಾಲರ್‌ ಕಮಿಷನ್‌ ಪಡೆದಿದ್ದಾರೆ ಎಂಬುದು ಆರೋಪ.

ADVERTISEMENT

ಫಿರಂಗಿ ವ್ಯವಹಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಹೊರಡಿಸಲಾಗಿರುವ ಬಂಧನದ ವಾರಂಟ್‌ ಅನ್ನು ರದ್ದುಪಡಿಸುವಂತೆ ಕೋರಿ ಕ್ವಟ್ರೋಚಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್‌ ಇಂದು ವಜಾ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.