ADVERTISEMENT

25 ವರ್ಷಗಳ ಹಿಂದೆ: ಭಾನುವಾರ 24–11–1996

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 20:15 IST
Last Updated 23 ನವೆಂಬರ್ 2021, 20:15 IST
   

ಗ್ರೀಸ್‌ನ ಐರಿನ್ ಸ್ಲೀವಾಗೆ ವಿಶ್ವಸಂದರಿ

ಬೆಂಗಳೂರು, ನ. 23– ವಿಶ್ವಸುಂದರಿ ಮುಕುಟ ಗ್ರೀಸ್‌ ದೇಶದ ಹದಿನೆಂಟರ ಚೆಲುವೆ ಐರಿನ್‌ ಸ್ಲೀವಾ ಅವರ ಮುಡಿಯೇರಿತು. ಹಿಂದೆಂದೂ ಕಾಣದಂಥ ಬಿಗಿ ಭದ್ರತಾ ವ್ಯವಸ್ಥೆಯ ನಡುವೆ ಝಗ ಝಗಿಸುತ್ತಿದ್ದ ವಿದ್ಯುತ್‌ ದೀಪಗಳಿಂದ ಅಲಂಕೃತವಾದ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿರ್ಮಾಣಗೊಂಡಿದ್ದ ಬಣ್ಣದ ಬೆಡಗಿನಲೋಕದಲ್ಲಿ ಶನಿವಾರ ಮಧ್ಯ ರಾತ್ರಿ 12 ಗಂಟೆಗೆ ಸರಿಯಾಗಿ 46ನೇ ವಿಶ್ವಸುಂದರಿಯಾಗಿ ಐರೆನ್ ಸ್ಲಿವಾ ಜಗತ್ತಿನ ಹೊಸ ಚೆಲುವೆಯ ಪಟ್ಟ ಅಲಂಕರಿಸಿದರು.

ನರ್ತಕಿಯರ ಸಂಭ್ರಮ, ಮಂಗಳ ಘೋಷ, ಮುಗಿಲು ಮುಟ್ಟಿದ ಪ್ರೇಕ್ಷಕರ ಹರ್ಷೋದ್ಗಾರಗಳ ನಡುವೆ ಇದುವರೆಗೆ ವಿಶ್ವಸುಂದರಿ ಪಟ್ಟ ಅಲಂಕರಿಸಿದ್ದ ವೆನಿಜುವೆಲಾದ ಚೆಲುವೆ ಜಾಕ್ವೆಲಿನ್ ಆಗುಲೀರಿಯಾ ಅವರು ಹಂಸಗಮನೆಯಾಗಿ ನಡೆದು ಬಂದ ಐರಿನ್ ಸ್ಲೀವಾ ಅವರಿಗೆ ವಿಶ್ವಸುಂದರಿ ಕಿರೀಟ ಧಾರಣೆ ಮಾಡಿ, ಹೊಸ ಚೆಲುವೆಗೆ ಮುತ್ತಿಕ್ಕಿದರು.

ADVERTISEMENT

ಬಂದ್‌ ವಿಫಲ: ಕಲ್ಲತೂರಾಟ, ಲಾಠಿ, ಅಶ್ರುವಾಯು

ಬೆಂಗಳೂರು, ನ. 23– ವಿಶ್ವ ಸುಂದರಿ ಸ್ಪರ್ಧೆಯ ವಿರುದ್ಧ ಬಿಜೆಪಿ ಇಂದು ಕರೆ ನೀಡಿದ್ದ ಬೆಂಗಳೂರು ಬಂದ್‌ ವಿಫಲವಾಯಿತು. ಆದರೆ ಪ್ರತಿಭಟನಾಕಾರರಿಂದ ಕಲ್ಲುತೂರಾಟ, ಪೊಲೀಸರಿಂದ ಅಶ್ರುವಾಯು ಪ್ರಯೋಗ, ಲಾಠಿ ಪ್ರಹಾರ, ಎಂಪಿಗಳು, ಶಾಸಕರು ಸೇರಿ ಸಾವಿರಾರು ಜನರ ಬಂಧನದೊಂದಿಗೆ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಸೆಯ ರೂಪ ಪಡೆಯಿತು.

ಬಸ್‌ಗಳಿಗೆ ಕಲ್ಲು ತೂರಿದ, ಅಂಗಡಿ ಬಲವಂತವಾಗಿ ಮುಚ್ಚಿಸಲು ಯತ್ನಿಸಿದ ಒಂದೆರಡು ಘಟನೆಗಳು ನಡೆದಿವೆ ಎಂದು ಹೆಚ್ಚುವರಿ ಪೊಲೀಸ್ ಕಮೀಷನರ್‌ ಎಚ್.ಆರ್. ಕಸ್ತೂರಿರಂಗನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.