ADVERTISEMENT

25 ವರ್ಷಗಳ ಹಿಂದೆ | ಶುಕ್ರವಾರ, 20–2–1998

ಪ್ರಜಾವಾಣಿ ವಿಶೇಷ
Published 19 ಫೆಬ್ರುವರಿ 2023, 21:45 IST
Last Updated 19 ಫೆಬ್ರುವರಿ 2023, 21:45 IST
   

‘ಕಾಂಗ್ರೆಸ್‌ ಬೆಂಬಲ ವಾಪಸಿಗೆ ಬೊಫೋರ್ಸ್‌ ಭೀತಿ ಕಾರಣ’

ದಾವಣಗೆರೆ, ಫೆ. 19– ಬೊಪೋರ್ಸ್‌ ಫಿರಂಗಿ ಖರೀದಿ ಹಗರಣ ತಮಗೆ ತಿರುಗುಬಾಣವಾಗುತ್ತದೆ ಎಂಬುದನ್ನು ಮನಗಂಡ ಕಾಂಗ್ರೆಸ್‌ ಪಕ್ಷ, ತಮ್ಮ ನೇತೃತ್ವದ ಸಂಯುಕ್ತ ರಂಗ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳಲು ಮುಖ್ಯ ಕಾರಣ ಎಂದು ಪ್ರಧಾನಿ ಐ.ಕೆ. ಗುಜ್ರಾಲ್‌ ಅವರು ಇಂದು ಇಲ್ಲಿ ಹೇಳಿದರು.

ಜನತಾದಳ ಪಕ್ಷದ ಅಭ್ಯರ್ಥಿ ಪ್ರೊ.ಎಚ್‌.ಎಸ್‌. ಪಟೇಲ್‌ ಅವರ ಪರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಪಕ್ಷ ಈಗ ಬೊಫೋರ್ಸ್‌ ಬಗ್ಗೆ ಮಾತನಾಡುತ್ತಿದೆ. ಈ ಹಗರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿನ ಬಹಳಷ್ಟು ಸಂಗತಿಗಳು ಅವರಿಗೆ ಪ್ರತಿಕೂಲ ವಾಗುವ ಸೂಚನೆಗಳು ಹೊರಬಿದ್ದಾಗ ಬೆಂಬಲ ಹಿಂತೆಗೆದುಕೊಂಡಿತು’ ಎಂದರು.

ADVERTISEMENT

ರಾಯಚೂರಿನ ಸ್ಫೋಟಕ?

ಬೆಂಗಳೂರು, ಫೆ. 19– ಈಚೆಗೆ
ಕೊಯಮತ್ತೂರಿನಲ್ಲಿ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟದ ಹಿನ್ನೆಲೆಯಲ್ಲಿ ತೀವ್ರ ಶೋಧ ನಡೆಸಿದ ತಮಿಳುನಾಡು ಪೊಲೀಸರು ಅಲ್ಲಿನ ತಿರುಮಲ ರಸ್ತೆಯಲ್ಲಿ ಎಲೆಕ್ಟ್ರಿಕ್‌ ಡಿಟೋನೇಟರ್‌, ಜಿಲೆಟಿನ್‌ ಕಡ್ಡಿಗಳು,
ಪೈಪ್‌ ಮತ್ತು ಪೆಟ್ರೋಲ್‌ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದು, ಅವುಗಳಲ್ಲಿ ಕೆಲವೊಂದು ರಾಯಚೂರಿನಲ್ಲಿ ತಯಾರಾದವುಗಳೆಂದು ಅಲ್ಲಿನ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

‘ಈ ಹಿನ್ನೆಲೆಯಲ್ಲಿ ರಾಜ್ಯದ ಒಂದು ತಂಡವನ್ನು ಅಧ್ಯಯನಕ್ಕಾಗಿ ಕೊಯ ಮತ್ತೂರಿಗೆ ಕಳುಹಿಸಲಾಗಿದೆ’ ಎಂದು ಪೊಲೀಸ್‌ ಮಹಾನಿರ್ದೇಶಕ ಮತ್ತು ಮಹಾ ನಿರೀಕ್ಷಕ ಟಿ. ಶ್ರೀನಿವಾಸುಲು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.