ADVERTISEMENT

25 ವರ್ಷಗಳ ಹಿಂದೆ | ಶಾಸಕ ಸ್ಥಾನಕ್ಕೆ ದೇಶಪಾಂಡೆ ಮತ್ತಿತರರ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 10 ಮೇ 2024, 0:27 IST
Last Updated 10 ಮೇ 2024, 0:27 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಶಾಸಕ ಸ್ಥಾನಕ್ಕೆ ದೇಶಪಾಂಡೆ ಮತ್ತಿತರರ ರಾಜೀನಾಮೆ

ಬೆಂಗಳೂರು, ಮೇ 9– ಇತ್ತೀಚೆಗೆ ಜನತಾದಳ ತ್ಯಜಿಸಿ ಕಾಂಗ್ರೆಸ್‌ ಸೇರಿದ್ದ ಮಾಜಿ ಸಚಿವರಾದ ಆರ್‌.ವಿ. ದೇಶಪಾಂಡೆ, ಗುರುಪಾದಪ್ಪ ನಾಗಮಾರಪಲ್ಲಿ, ಪಿ.ಸಿ.ಸಿದ್ದನಗೌಡರ್‌ ಹಾಗೂ ಬಿ.ಆರ್‌. ಯಾವಗಲ್‌ ಅವರು ವಿಧಾನಸಭಾ ಸದಸ್ಯತ್ವಕ್ಕೆ ಇಂದು ರಾಜೀನಾಮೆ ಸಲ್ಲಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ರಾಜೀನಾಮೆ ಪತ್ರಗಳನ್ನು ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಂ. ಕೃಷ್ಣ ಅವರಿಗೆ ಸಲ್ಲಿಸಿದರು.

ADVERTISEMENT

ಇಂದು ಭಾನುವಾರವಾದ್ದರಿಂದ ಅವರ ರಾಜೀನಾಮೆ ಪತ್ರಗಳನ್ನು ನಾಳೆ ವಿಧಾನಸಭೆಯ ಅಧ್ಯಕ್ಷರಿಗೆ ಕಳಿಸಿ ತಕ್ಷಣ ಅಂಗೀಕರಿಸುವಂತೆ ಕೇಳಿಕೊಳ್ಳಲಾಗುವುದು ಎಂದರು.

ವಾಜಪೇಯಿ ಸರ್ಕಾರಕ್ಕೆ ಎಲ್ಲ ನಿರ್ಧಾರಗಳ ಹಕ್ಕಿದೆ: ಜಿವಿಜಿ

ನವದೆಹಲಿ, ಮೇ 9 (ಯುಎನ್‌ಐ)– ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಸೆರಿದಂತೆ ವಾಜಪೇಯಿ ಸರ್ಕಾರ ಎಲ್ಲಾ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ಚುನಾವಣಾ ಆಯುಕ್ತ ಜಿವಿಜಿ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

ಮಧ್ಯಂತರ ಚುನಾವಣೆ ನಡೆಯುವವರೆಗೆ ಸಿಟಿಬಿಟಿಯಂತಹ ಪ್ರಮುಖ ರಾಷ್ಟ್ರೀಯ ವಿಷಯಗಳ ಬಗ್ಗೆಯೂ ವಾಜಪೇಯಿ ನೇತೃತ್ವದ ಸರ್ಕಾರವು ನಿರ್ಧಾರ ತೆಗೆದುಕೊಳ್ಳ
ಬಹುದಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.