ADVERTISEMENT

25 ವರ್ಷಗಳ ಹಿಂದೆ | ಗುರುವಾರ, 6–7–1995

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 19:30 IST
Last Updated 5 ಜುಲೈ 2020, 19:30 IST

ಮಡಿಕೇರಿಯಲ್ಲಿ ಗೌಡರಿಗೆಘೇರಾವ್‌: ಲಾಠಿ ಪ್ರಹಾರ

ಮಡಿಕೇರಿ, ಜುಲೈ 5– ಮುಖ್ಯಮಂತ್ರಿ ಆದ ಮೇಲೆ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿದ ಎಚ್‌.ಡಿ.ದೇವೇಗೌಡ ಅವರನ್ನು ಸುಮಾರು ಅರ್ಧಗಂಟೆ ಕಾಲ ಘೇರಾವ್‌ ಮಾಡಿದ ಕೊಡಗು ಜಿಲ್ಲಾ ಸಂಯುಕ್ತ ಹೋರಾಟ ಸಮಿತಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಇಂದು ಇಲ್ಲಿ ಲಾಠಿ ಪ್ರಹಾರ ಮಾಡಿದರು.

‘ಜನತಾ ದರ್ಶನ’ ಕಾರ್ಯಕ್ರಮಕ್ಕೆಂದು ದೇವೇಗೌಡರು ಇಲ್ಲಿನ ಜಿಲ್ಲಾಧಿಕಾರಿಕಚೇರಿ ಇರುವ ಕೋಟೆ ಆವರಣಕ್ಕೆ ಬಂದಾಗ, ಕಪ್ಪು ಬಾವುಟ ಹಿಡಿದು ಜಮಾ ಯಿಸಿದ್ದ ನೂರಾರು ಪ್ರದರ್ಶನಕಾರರಿಂದ ತೀವ್ರ ಆಕ್ರೋಶ ಎದುರಿಸಬೇಕಾಯಿತು.

ADVERTISEMENT

ಕಾಫಿ ತೆರಿಗೆ ಇಳಿಸಬೇಕು ಎಂಬುದೂ ಸೇರಿದಂತೆ ಜಿಲ್ಲೆಯ ಬೇಡಿಕೆಗಳ ಬಗ್ಗೆ ಕಳೆದ ಮಾರ್ಚ್‌ 23ರಿಂದ ಹಂತ ಹಂತವಾಗಿ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದ ಬೆಳೆಗಾರ ರೊಂದಿಗೆ ಇದಕ್ಕೆ ಮುನ್ನ ಮುಖ್ಯಮಂತ್ರಿ ನಡೆಸಿದ ಸಂಧಾನ ಮಾತುಕತೆ ವಿಫಲವಾಯಿತು.

ಹುಬ್ಬಳ್ಳಿ ಬಳಿ ರೈಲಿನಲ್ಲಿ ಮತ್ತೆ ದರೋಡೆ

ಹುಬ್ಬಳ್ಳಿ, ಜುಲೈ 5– ಧಾರವಾಡ ಮತ್ತು ಗದಗದಲ್ಲಿ ಕಳೆದ ಒಂದು ತಿಂಗಳಲ್ಲಿ ಸಂಭವಿಸಿದ ಎರಡು ರೈಲು ದರೋಡೆಗಳ ನೆನಪು ಮಾಸುವ ಮೊದಲೇ ಇಂದು ಮುಂಜಾನೆ 6.30ರ ಹೊತ್ತಿಗೆ ಹುಬ್ಬಳ್ಳಿಗೆ ಸಮೀಪದ ಕುಸುಗಲ್‌ನಲ್ಲಿ ಗುಂತಕಲ್‌– ಹುಬ್ಬಳ್ಳಿ ಪ್ಯಾಸೆಂಜರ್‌ ರೈಲುಗಾಡಿಯಲ್ಲಿ ದರೋಡೆ ನಡೆದಿದೆ.

ನಾಲ್ಕುಮಂದಿಯಿದ್ದ ದರೋಡೆ ಕೋರರ ತಂಡ ಬಳ್ಳಾರಿಯ ಮಲ್ಲಿಕಾರ್ಜುನ (25) ಎಂಬ ವ್ಯಕ್ತಿಗೆ ಚಾಕು ತೋರಿಸಿ ಬೆದರಿಸಿ ಅವರ ಬಳಿ ಇದ್ದ 2,500 ರೂಪಾಯಿ ನಗದು ಮತ್ತು ಒಂದು ತೊಲ ಬಂಗಾರವನ್ನು ಕಿತ್ತುಕೊಂಡಿದೆ ಎಂದು ರೈಲ್ವೆ ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.