ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಶನಿವಾರ, 4–11–1995

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 16:17 IST
Last Updated 3 ನವೆಂಬರ್ 2020, 16:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕಾಶ್ಮೀರ: ರಾಜಕೀಯ ಪರಿಹಾರ ಸೂತ್ರ ಸಿದ್ಧ

ನವದೆಹಲಿ, ನ. 3 (ಯುಎನ್‌ಐ)– ದಿವಂಗತ ಇಂದಿರಾ ಗಾಂಧಿ ಮತ್ತು ಷೇಕ್‌ ಅಬ್ದುಲ್ಲಾ ನಡುವೆ 1975ರಲ್ಲಿ ಆಗಿರುವ ಒಪ್ಪಂದದ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜಕೀಯ ಪರಿಹಾರ ಸೂತ್ರ ನೀಡಲು ಕೇಂದ್ರ ಸರ್ಕಾರವು ಮುಂದೆ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸ್ಥಳದಲ್ಲೇ ಪರಿಸ್ಥಿತಿ ಅಧ್ಯಯನ ಮಾಡಲು ಚುನಾವಣಾ ಆಯೋಗದ ಎಲ್ಲ ಮೂವರು ಸದಸ್ಯರು ಶ್ರೀನಗರಕ್ಕೆ ಈ ತಿಂಗಳ 8ರಂದು ಭೇಟಿ ನೀಡಲಿದ್ದಾರೆ.

ADVERTISEMENT

ಹಟ್ಟಿ ಚಿನ್ನದ ಗಣಿಯಲ್ಲಿ ಹಠಾತ್‌ ಮುಷ್ಕರ

ರಾಯಚೂರು, ನ. 3– ಕೆಲಸದ ಮರು ವಿಂಗಡಣೆಯನ್ನು ಪ್ರತಿಭಟಿಸಿ ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಇಂದುಹಠಾತ್‌ ಮುಷ್ಕರ ಆರಂಭಿಸಿದ್ದರಿಂದ ಚಿನ್ನದ ಉತ್ಪಾದನೆ ಸೇರಿದಂತೆ ಗಣಿಯ ಎಲ್ಲ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ.

ಯಾವುದೇ ಮುನ್ಸೂಚನೆ ಇಲ್ಲದೆ ಕಾರ್ಮಿಕರು ಮುಷ್ಕರ ಆರಂಭಿಸಿದ್ದು ಚಿನ್ನದ ಗಣಿ ಆಡಳಿತಕ್ಕೆ ದಿಗ್ಭ್ರಮೆ ಉಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.