ADVERTISEMENT

ಸೋಮವಾರ, 14–11–1994

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 19:45 IST
Last Updated 13 ನವೆಂಬರ್ 2019, 19:45 IST

ಕಾಶ್ಮೀರ: ಕೆಲವು ತಿಂಗಳಲ್ಲಿ ಚುನಾವಣೆ– ಶೇಷನ್ ಆಶಯ
ಅಲಹಾಬಾದ್‌, ನ. 13 (ಯುಎನ್‌ಐ)
– ಜಮ್ಮು–ಕಾಶ್ಮೀರದಲ್ಲಿ ಇನ್ನು ಕೆಲವು ತಿಂಗಳುಗಳಲ್ಲಿಯೇ ಚುನಾವಣೆ ನಡೆಸುವ ಎಲ್ಲ ಸಾಧ್ಯತೆಯೂ ಇದೆ ಎಂದು ಮುಖ್ಯ ಚುನಾವಣಾ ಕಮೀಷನರ್ ಟಿ.ಎನ್. ಶೇಷನ್ ಹೇಳಿದ್ದಾರೆ.

ಅವರು ಕಳೆದ ಸಂಜೆ ಇಲ್ಲಿ ವರದಿಗಾರರೊಂದಿಗೆ ಮಾತನಾಡಿ ಚುನಾವಣಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ಮುಗಿದ ನಂತರ ‘ಅಲ್ಲಿ ಆದಷ್ಟು ಶೀಘ್ರ ಚುನಾವಣೆ ನಡೆಸಲು ನಾವು ಬಯಸುತ್ತೇವೆ’ ಎಂದರು.

ಎಲ್‌ಟಿಟಿಈ ಕದನ ವಿರಾಮ
‌ಕೊಲಂಬೊ, ನ. 13 (ಯುಎನ್‌ಐ)–
ಶ್ರೀಲಂಕಾದ ಪ್ರಥಮ ಮಹಿಳಾ ಕಾರ್ಯಾಧ್ಯಕ್ಷರಾಗಿ ಚಂದ್ರಿಕಾ ಕುಮಾರತುಂಗ ಅವರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಎಲ್‌ಟಿಟಿಈ ಉಗ್ರಗಾಮಿಗಳು ಒಂದು ವಾರದ ಕದನ ವಿರಾಮ ಘೋಷಿಸಿದ್ದಾರೆ.

ADVERTISEMENT

ಈ ಅವಧಿಯಲ್ಲಿ ಭದ್ರತಾ ಪಡೆಗಳ ಮೇಲೆ ಯಾವುದೇ ದಾಳಿ ನಡೆಸುವುದಿಲ್ಲ ಎಂದು ಸಂದೇಶವೊಂದರಲ್ಲಿ ಎಲ್‌ಟಿಟಿಈ ಉಗ್ರಗಾಮಿಗಳು ತಿಳಿಸಿದ್ದಾರೆ. ಆದರೆ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ಹಕ್ಕನ್ನು ಅವರು ಕಾಯ್ದಿರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.