ADVERTISEMENT

25 ವರ್ಷಗಳ ಹಿಂದೆ: ವಿಧಾನಸೌಧ, ಸರ್ಕಾರಿ ಕಚೇರಿ ಪ್ರವೇಶ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 19:30 IST
Last Updated 30 ಮಾರ್ಚ್ 2023, 19:30 IST
   

ಹೈದರಾಬಾದ್‌, ಮಾರ್ಚ್‌ 30 (ಪಿಟಿಐ)– ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ (ಟಿಡಿಪಿ) ಹಾಗೂ ಆದರ ಮಿತ್ರ ಪಕ್ಷಗಳಾದ ಸಿಪಿಐ ಹಾಗೂ ಸಿಪಿಎಂ ನಡುವಿನ ಸಂಬಂಧ ಮುರಿದು ಬೀಳುವ ಹಂತ ತಲುಪಿದೆ.

‘ಬಿಜೆಪಿ ಸರ್ಕಾರವನ್ನು ಬೆಂಬಲಿಸುವ ಮೂಲಕ ಜಾತ್ಯತೀತ ಶಕ್ತಿಗಳಿಗೆ ಭಾರಿ ಪೆಟ್ಟು ಕೊಟ್ಟಿರುವ ಟಿಡಿಪಿ ವಿರುದ್ಧ ನಾವು ರಾಜಕೀಯ ಯುದ್ಧ ಆರಂಭಿಸುತ್ತೇವೆ‘ ಎಂದು ಸಿಪಿಎಂ ಮೂಲಗಳು ತಿಳಿಸಿವೆ.

ವಿಧಾನಸೌಧ, ಸರ್ಕಾರಿ ಕಚೇರಿ ಪ್ರವೇಶ ನಿರ್ಬಂಧ

ADVERTISEMENT

ಬೆಂಗಳೂರು, ಮಾರ್ಚ್‌ 30– ವಿಧಾನಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ.

‘ವಿಧಾನಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿರುವ ಸಚಿವರ ಮತ್ತು ಕಾರ್ಯದರ್ಶಿಗಳ ಕಚೇರಿಗಳಿಗೆ ಸಾರ್ವಜನಿಕರು ಎಲ್ಲ ಸಮಯದಲ್ಲೂ ತಂಡೋಪ ತಂಡವಾಗಿ ಪ್ರವೇಶಿಸುತ್ತಿರುವುದರಿಂದ ಸಚಿವರು ಮತ್ತು ಅಧಿಕಾರಿಗಳ ದೈನಂದಿನ ಕಾರ್ಯಗಳಿಗೆ ಅಡ್ಡಿಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ‘ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌.ಎ.ಮುತ್ತಣ್ಣ ಅವರು ಅಧಿಕೃತ ಪ್ರಕಟಣೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.