ಕೆಪಿಎಸ್‌ಸಿ ನಿರ್ಧಾರ ತಂದಿರುವ ಆತಂಕ
ಬೆಂಗಳೂರು, ಜೂನ್ 9– ಗ್ರಾಮೀಣ ಕೃಪಾಂಕ ನೀಡುವ ವಿಚಾರ ಇನ್ನೂ ಇತ್ಯರ್ಥವಾಗದಿರುವಾಗಲೇ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಯ ಸಂದರ್ಶನ ನಡೆಸಲು ಮುಂದಾಗಿರುವುದು ಕೃಪಾಂಕ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳನ್ನು ಆತಂಕಕ್ಕೆ ಈಡುಮಾಡಿದೆ.
ಸುಪ್ರೀಂ ಕೋರ್ಟ್ ಗ್ರಾಮೀಣ ಕೃಪಾಂಕ ರದ್ದುಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕುರಿತು ಅಧ್ಯಯನ ನಡೆಸಲು ಎರಡೂವರೆ ತಿಂಗಳ ಹಿಂದೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಮಕೃಷ್ಣ ನೇತೃತ್ವದ ಏಕಸದಸ್ಯ ಆಯೋಗವನ್ನು ರಚಿಸಿತು.
ನಂತರದ ಬೆಳವಣಿಗೆಗಳಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ‘ಗ್ರಾಮೀಣ ಕೃಪಾಂಕ ನೀಡುವ ಕುರಿತು ಏಕಸದಸ್ಯ ಆಯೋಗ ವರದಿ ನೀಡುವವರೆಗೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.
ಭೀಷ್ಮ ಸಹಾನಿಗೆ ‘ಶಲಾಕ ಸಮ್ಮಾನ್’
ನವದೆಹಲಿ, ಜೂನ್ 9 – ಹಿಂದಿ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಖ್ಯಾತ ಬರಹಗಾರ ಭೀಷ್ಮ ಸಹಾನಿ ಅವರಿಗೆ ದೆಹಲಿ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಯಾದ ‘ಶಲಾಕ ಸಮ್ಮಾನ್’ ಅನ್ನು ನೀಡಿ ಇಂದು ಗೌರವಿಸಲಾಯಿತು.
ಹಿಂದಿ ಅಕಾಡೆಮಿ ಸ್ಥಾಪಿಸಿರುವ ಈ ಪ್ರಶಸ್ತಿಯಲ್ಲಿ 1.11 ಲಕ್ಷ ರೂಪಾಯಿ ನಗದು ಕೂಡಾ ಸೇರಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.