ADVERTISEMENT

25 ವರ್ಷಗಳ ಹಿಂದೆ: ಕೇಸರಿಗೆ ತಲುಪಿದ ಗುಜ್ರಾಲ್‌ ಪತ್ರ: ಬದಲಾಗದ ರಂಗದ ನಿಲುವು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 19:30 IST
Last Updated 24 ನವೆಂಬರ್ 2022, 19:30 IST
ಸಾಂಕೇತಿಕಚಿತ್ರ
ಸಾಂಕೇತಿಕಚಿತ್ರ   

ಕೇಸರಿಗೆ ತಲುಪಿದ ಗುಜ್ರಾಲ್‌ ಪತ್ರ: ಬದಲಾಗದ ರಂಗದ ನಿಲುವು

ನವದೆಹಲಿ, ನವೆಂಬರ್‌ 24– ಕೇಂದ್ರ ಸಂಪುಟದಿಂದ ಡಿಎಂಕೆ ಸಚಿವರನ್ನು ಕೈಬಿಡಬೇಕು ಎಂಬ ಕಾಂಗ್ರೆಸ್‌ ಬೇಡಿಕೆಯನ್ನು ತಿರಸ್ಕರಿಸಿ ಪ್ರಧಾನಿ ಐ.ಕೆ. ಗುಜ್ರಾಲ್‌ ಇಂದು ರಾತ್ರಿ ಔಪಚಾರಿಕವಾಗಿ ಕಾಂಗ್ರೆಸ್‌ ಅಧ್ಯಕ್ಷ ಸೀತಾರಾಂ ಕೇಸರಿ ಅವರಿಗೆ ಪತ್ರ ತಲುಪಿಸಿದ್ದಾರೆ.

ಪ್ರಧಾನಿ ಅವರ ಪತ್ರ ತಲುಪಿದ ನಂತರ ಇಂದು ಮಧ್ಯರಾತ್ರಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಪತ್ರದ ಬಗ್ಗೆ ಚರ್ಚೆ ನಡೆಸಿತಾದರೂ ಯಾವುದೇ ನಿರ್ಧಾರ ಕೈಗೊಳ್ಳದೇ ಸಭೆಯನ್ನು ನಾಳೆಗೆ ಮುಂದೂಡಿತು. ನಾಳಿನ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಈ ನಡುವೆ ಮಧ್ಯರಾತ್ರಿ ಸಭೆ ಸೇರಿದ್ದ ಸಂಯುಕ್ತ ರಂಗದ ನಿರ್ಣಾಯಕ ಸಮಿತಿ ಪ್ರತಿಕ್ರಿಯೆ ಕಾಯ್ದು ನೋಡಲು ತೀರ್ಮಾನಿಸಿತು.

ADVERTISEMENT

ಸದನದ ಹೊರಗೆ ರಾಜಕೀಯ ಬಿಕ್ಕಟ್ಟು ಪರಿಹಾರಕ್ಕೆ ಸಂಗ್ಮಾ ಸಲ‌ಹೆ

ನವದೆಹಲಿ, ನವೆಂಬರ್‌ 24– ರಾಜಕೀಯ ಬಿಕ್ಕಟ್ಟು ಪರಿಹಾರ ಸದ‌ನದೊಳಗೆ ಅಸಾಧ್ಯವಾದ್ದರಿಂದ ರಾಜಕೀಯ ಪಕ್ಷಗಳು ಸಂಸತ್ತಿನ ಹೊರಗೆ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಲೋಕಸಭೆಯ ಸ್ಪೀಕರ್‌ ಪಿ.ಎ. ಸಂಗ್ಮಾ ಹೇಳಿದರು.

‘ಲೋಕಸಭೆ ಕಲಾಪವನ್ನು ಅನಿರ್ದಿಷ್ಟ ಕಾಲ ಮುಂದೂಡುವ ಮೂಲಕ, ಮೊದಲು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ನಂತರ ನನ್ನಲ್ಲಿಗೆ ಬನ್ನಿ ಎಂದು ಹೇಳಿದ್ದೇನೆ. ಯಾವುದೇ ಸದನವನ್ನು ಪುನಃ ಕರೆಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.