ADVERTISEMENT

25 ವರ್ಷಗಳ ಹಿಂದೆ: ಭಾನುವಾರ, 21–1–1996

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 15:49 IST
Last Updated 20 ಜನವರಿ 2021, 15:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವೃತ್ತಿಶಿಕ್ಷಣ: ಸರ್ಕಾರದಿಂದ ಶೀಘ್ರ ಮೇಲ್ಮನವಿ

ಬೆಂಗಳೂರು, ಜ. 20– ಅಲ್ಪಸಂಖ್ಯಾತರ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಹೊರ ರಾಜ್ಯಗಳ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧಿಸಿದ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಮೇಲ್ಮನವಿ ಸಲ್ಲಿಸಲಿದೆ.

ಈ ವಿಷಯವನ್ನು ಕಾನೂನು ಸಚಿವ ಎಂ.ಸಿ.ನಾಣಯ್ಯ ಅವರು ಇಂದು ಇಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಶೇಕಡ 50ರಷ್ಟು ಸೀಟುಗಳನ್ನು ನೀಡಿರುವುದು ಹೊರಗಿನ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಿ ಎಂದಲ್ಲ, ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ರೂಪಿಸಿರುವುದು ನಮ್ಮ ಪ್ರದೇಶದ ಮಕ್ಕಳ ಅನುಕೂಲಕ್ಕಾಗಿ ಎಂದು ಅವರು ನುಡಿದರು.

ADVERTISEMENT

ಹವಾಲ: ಕೇಂದ್ರ ಸಂಪುಟದಲ್ಲಿ ಬಿಕ್ಕಟ್ಟು– ರಾಜೀನಾಮೆಗೆ ಮುಂದಾದ ಪೈಲಟ್‌

ನವದೆಹಲಿ, ಜ. 20 (ಪಿಟಿಐ, ಯುಎನ್‌ಐ)– ಹವಾಲ ಹಗರಣದ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟ ಹಾಗೂ ಕಾಂಗ್ರೆಸ್‌(ಐ)ನಲ್ಲಿ ಭಿನ್ನಮತ ಬಲಗೊಳ್ಳುತ್ತಿದೆ. ಈ ಪ್ರಕರಣದ ಸಂಬಂಧ ವಿಸ್ತೃತ ಚರ್ಚೆಗೆ ಕೂಡಲೇ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಕರೆಯಬೇಕು ಎಂದು ಹಿರಿಯ ನಾಯಕ ಕೆ.ಕರುಣಾಕರನ್‌ ಹಾಗೂ ಪರಿಸರ ಖಾತೆ ಸಚಿವ ರಾಜೇಶ್‌ ಪೈಲಟ್‌ ಅವರು ಪ್ರಧಾನಿಯವರನ್ನು ಒತ್ತಾಯಪಡಿ
ಸಿದ್ದಲ್ಲದೆ ಪಕ್ಷ ಮೌನ ವಹಿಸಿರುವುದನ್ನು ಪ್ರಶ್ನಿಸಿ ಪೈಲಟ್‌ ಅವರು ರಾಜೀನಾಮೆಗೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.