3 ರಾಜ್ಯಗಳಲ್ಲಿ ಹಿಂಸಾಚಾರ: ಗೋಲಿಬಾರ್, 10 ಸಾವು
ನವದೆಹಲಿ, ಮೇ 2 (ಪಿಟಿಐ, ಯುಎನ್‌ಐ)– ಇಂದು ನಡೆದ ಎರಡನೇ ಸುತ್ತಿನ ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ಬಿಹಾರ, ಆಂಧ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ, ಮತಪತ್ರ,
ಮತಪೆಟ್ಟಿಗೆ, ಚುನಾವಣಾ ಸಿಬ್ಬಂದಿ ಅಪಹರಣದ ನಡುವೆ ಭುಗಿಲೆದ್ದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿಗಳು ಸೇರಿ 10 ಮಂದಿ ಸತ್ತಿದ್ದಾರೆ. ಗುಂಪು ಘರ್ಷಣೆಗಳಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹಲವೆಡೆ ನಕಲಿ ಮತದಾನ ನಡೆದಿದೆ.
ಚುನಾವಣಾ ಹಿಂಸಾಚಾರಕ್ಕೆ ಬಿಹಾರದಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ 9 ಮಂದಿ ಹಾಗೂ ಆಂಧ್ರದಲ್ಲಿ ನಕ್ಸಲೀಯರು ಅಡಗಿಸಿದ್ದ ನೆಲ ಬಾಂಬ್ ಸ್ಫೋಟಿಸಿ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.
ನಕ್ಸಲೀಯರಿಂದ ಹಿಂಸಾಚಾರ: ಹತ್ಯೆ
ಹೈದರಾಬಾದ್, ಮೇ 2 (ಯುಎನ್‌ಐ)– ಮತದಾನ ಬಹಿಷ್ಕಾರಕ್ಕೆ ಪೀಪಲ್ಸ್ ವಾರ್ ಗ್ರೂಪ್ ಕರೆ ನೀಡಿದ್ದ ಆಂಧ್ರ ಪ್ರದೇಶದ ಉತ್ತರ ತೆಲಂಗಾಣ ಪ್ರದೇಶದಲ್ಲಿ ಪ್ರದೇಶ ಚುನಾವಣಾಧಿಕಾರಿಗಳ ವಾಹನ ಚಾಲಕನ ಅಪಹರಣ, ಸಬ್‌ಇನ್‌ಸ್ಪೆಕ್ಟರ್ ಒಬ್ಬರ ಹತ್ಯೆಯೂ ಸೇರಿದಂತೆ ವ್ಯಾಪಕ ಹಿಂಸಾಚಾರ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.