ADVERTISEMENT

25 ವರ್ಷಗಳ ಹಿಂದೆ | ಮಂಗಳವಾರ 14–3–1995

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 19:45 IST
Last Updated 13 ಮಾರ್ಚ್ 2020, 19:45 IST

ಮಹಾರಾಷ್ಟ್ರಕ್ಕೆ ಬಿಜೆಪಿ– ಸೇನೆ ಸರ್ಕಾರ
ಮುಂಬೈ, ಮಾರ್ಚಿ 13 (ಪಿಟಿಐ, ಯುಎನ್ಐ):
ಮಹಾರಾಷ್ಟ್ರದಲ್ಲಿ ಮನೋಹರ ಗಜಾನನ ಜೋಷಿ ಅವರ ನೇತೃತ್ವದ ಶಿವಸೇನೆ– ಬಿಜೆಪಿ ಮೈತ್ರಿಕೂಟ ಸರ್ಕಾರ ನಾಳೆ ಅಧಿಕಾರ ವಹಿಸಿಕೊಳ್ಳಲಿದೆ.

ರಾಜ್ಯದ 35 ವರ್ಷಗಳ ಇತಿಹಾಸದಲ್ಲಿ ಕಾಂಗೈಯೇತರ ಸರ್ಕಾರ ಅಧಿಕಾರಕ್ಕೆ ಬರುತ್ತಿರುವುದು ಇದು ಎರಡನೇ ಸಲ. 1978ರಲ್ಲಿ ಶರದ್‌ ಪವಾರ್ ಅವರು ಆಗ ಆಡಳಿತ ನಡೆಸುತ್ತಿದ್ದ ಕಾಂಗೈನೊಳಗೆ ಒಡಕು ಉಂಟು ಮಾಡಿ ಬಿಜೆಪಿ ಸೇರಿದಂತೆ ಹಲ ಪ್ರತಿಪಕ್ಷಗಳ ಬೆಂಬಲದೊಡನೆ ಪ್ರಗತಿಪರ ಪ್ರಜಾಸತ್ತಾತ್ಮಕ ರಂಗದ ಹೆಸರಿನಲ್ಲಿ ಸರ್ಕಾರ ರಚಿಸಿದ್ದರು.

ಈ ಬಾರಿ 288 ಸದಸ್ಯ ಬಲದ ವಿಧಾನಸಭೆಯಲ್ಲಿ 80 ಸ್ಥಾನ ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗೈ ಪಕ್ಷ, ಸರ್ಕಾರ ರಚಿಸುವ ಹಕ್ಕು ಪ್ರತಿಪಾದಿಸದಿರಲು ನಿರ್ಧರಿಸಿದ ಬಳಿಕ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬರಲು ಹಾದಿ ಸುಗಮವಾದಂತಾಯಿತು. ಅಲ್ಲದೆ, ‘ಭ್ರಷ್ಟ’ ಶರದ್ ಪವಾರ್ ಅವರು ಸರ್ಕಾರ ರಚಿಸಲು ಮುಂದಾದರೆ ತಾನು ಬೆಂಬಲ ನೀಡುವುದಿಲ್ಲ ಎಂದು 11 ಸದಸ್ಯರನ್ನು ಹೊಂದಿರುವ ಜನತಾ ದಳ ನಿನ್ನೆಯೇ ಪ್ರಕಟಿಸಿತ್ತು.

ADVERTISEMENT

ಕೇಶುಭಾಯ್ ಗುಜರಾತ್ ಮುಖ್ಯಮಂತ್ರಿ
ಗಾಂಧಿನಗರ, ಮಾರ್ಚಿ 13 (ಪಿಟಿಐ, ಯುಎನ್‌ಐ):
ಕೇಶುಭಾಯ್ ಶಿವದಾಸ್ ಪಟೇಲ್ ಅವರ ನೇತೃತ್ವದ ಬಿಜೆಪಿ ಸರ್ಕಾರವು ಗುಜರಾತಿನಲ್ಲಿ ಮೊತ್ತಮೊದಲ ಬಾರಿಗೆ ನಾಳೆ ಅಧಿಕಾರ ಸ್ವೀಕರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.