ADVERTISEMENT

25 ವರ್ಷಗಳ ಹಿಂದೆ | ಸೋಮವಾರ, 17–4–1995

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 19:27 IST
Last Updated 16 ಏಪ್ರಿಲ್ 2020, 19:27 IST

ಪ್ರವೇಶ ಪರೀಕ್ಷೆ ರದ್ದತಿ ಇಂಗಿತ ಶಿಕ್ಷಣ ಕ್ಷೇತ್ರದಲ್ಲಿ ಶಂಕೆ

ಬೆಂಗಳೂರು, ಏ. 16– ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಶಿಕ್ಷಣ ಪ್ರವೇಶದಲ್ಲಿ ಕಳೆದ ವರ್ಷ ಉಂಟಾಗಿದ್ದ ಗೊಂದಲ ನಿವಾರಣೆಗಾಗಿ ‘ಸಮಗ್ರ ವೃತ್ತಿ ಶಿಕ್ಷಣ ಮಸೂದೆ’ಯನ್ನು ಇದೇ ಅಧಿವೇಶನದಲ್ಲಿ ತರುವ ಸರ್ಕಾರದ ಇಚ್ಛೆ ಸದುದ್ದೇಶದಿಂದ ಕೂಡಿದ್ದರೂ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರದ್ದುಗೊಳಿಸಬೇಕೆಂಬ ಇಂಗಿತ ಶಿಕ್ಷಣ ಕ್ಷೇತ್ರದಲ್ಲಿ ಶಂಕೆ ಮೂಡಿಸಿದೆ.

ಸುಪ್ರೀಂ ಕೋರ್ಟ್‌ ತೀರ್ಪು ಹಾಗೂ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರದ ಪದೇ ಪದೇ ಬದಲಾದ ನಿಲುವಿನಿಂದಾಗಿ ಕಳೆದ ಬಾರಿ ವೈದ್ಯಕೀಯ, ಎಂಜಿನಿಯರಿಂಗ್‌ ಪ್ರವೇಶ, ಸಾರ್ವಜನಿಕರನ್ನು ಕಂಗೆಡಿಸಿತ್ತು. ಇದರಿಂದ ಹಿಂದಿನ ಸರ್ಕಾರಕ್ಕೂ ಅಪಕೀರ್ತಿ ಬಂದಿತ್ತು.

ADVERTISEMENT

ಕಾಶ್ಮೀರದಲ್ಲಿ ಜುಲೈ 17ಕ್ಕೆ ಮುನ್ನ ಚುನಾವಣೆ ಸಂಭವ

ಜಮ್ಮು, ಏ. 16 (ಪಿಟಿಐ)– ಜಮ್ಮು– ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಅವಧಿ ಮುಂದಿನ ಜುಲೈ 17ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಸಲು ಅಧಿಕಾರಿಗಳು ಸಜ್ಜಾಗಿದ್ದಾರೆ.

ಏತನ್ಮಧ್ಯೆ ರಾಜ್ಯ ವಿಧಾನಸಭೆಗೆ ಶೀಘ್ರದಲ್ಲಿಯೇ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಅದಕ್ಕಾಗಿ ಸಿದ್ಧರಾಗಿರುವಂತೆ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.