ADVERTISEMENT

25 ವರ್ಷಗಳ ಹಿಂದೆ| ಬುಧವಾರ 10–05–1995

​ಪ್ರಜಾವಾಣಿ ವಾರ್ತೆ
Published 9 ಮೇ 2020, 19:30 IST
Last Updated 9 ಮೇ 2020, 19:30 IST

‘ಒತ್ತಡಕ್ಕೆ ಮಣಿದು ಕ್ಷಿಪಣಿ ಕಾರ್ಯಕ್ರಮ ರದ್ದು ಇಲ್ಲ’

ನವದೆಹಲಿ, ಮೇ 9 (ಯುಎನ್‌ಐ): ಯಾವುದೇ ದೇಶದ ಒತ್ತಡಕ್ಕೆ ಮಣಿದು ‘ಪೃಥ್ವಿ’ ಕ್ಷಿಪಣಿ ಕಾರ್ಯಕ್ರಮವನ್ನು ನಿಲ್ಲಿಸುವುದಿಲ್ಲ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಮಲ್ಲಿಕಾರ್ಜುನ ಅವರು ಇಂದು ಲೋಕಸಭೆಗೆ ತಿಳಿಸಿದರು.

ಪರೀಕ್ಷಾ ಉಡಾವಣೆಯಲ್ಲಿ ಯಶಸ್ವಿಯಾಗಿರುವ ‘ಪೃಥ್ವಿ’ ಕ್ಷಿಪಣಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ ಎಂಬುದನ್ನು ಅಲ್ಲಗೆಳೆದ ಅವರು, ಅಮೆರಿಕ ಅಥವಾ ಬೇರಾವುದೇ ದೇಶದ ಒತ್ತಡಕ್ಕೆ ಮಣಿದು ಕಾರ್ಯಕ್ರಮವನ್ನು ಮೂಲೆಗುಂಪು ಮಾಡಿಲ್ಲ ಎಂದು ಹೇಳಿದರು. ರಕ್ಷಣಾ ಖಾತೆ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಮಧ್ಯೆ ಪ್ರವೇಶಿಸಿ ಅವರು ಈ ಸ್ಪಷ್ಟನೆ ನೀಡಿದರು.

ADVERTISEMENT

ರಕ್ಷಣಾ ಪಡೆಗಳ ಆಧುನೀಕರಣ ಮತ್ತು ಶಸ್ತ್ರಾಸ್ತ್ರಗಳ ಸ್ಥಳೀಯ ತಯಾರಿಕೆ ವಿಚಾರದಲ್ಲಿ ಸರ್ಕಾರ ತುಂಬ ಕಾತರವಾಗಿದೆ ಎಂದು ಹೇಳಿದ ಅವರು 2005ನೇ ಇಸವಿಯ ಹೊತ್ತಿಗೆ ರಕ್ಷಣಾ ಪಡೆಗಳ ಅಗತ್ಯಗಳಲ್ಲಿ ಕನಿಷ್ಠ ಶೇ 75ರಷ್ಟನ್ನು ಭಾರತದಲ್ಲೇ ತಯಾರಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.