ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಸೋಮವಾರ, 8–1–1996

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 19:30 IST
Last Updated 7 ಜನವರಿ 2021, 19:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಇಂದು ಬೆಂಗಳೂರು ಬಂದ್‌: ಬಿಗಿ ಬಂದೋಬಸ್ತ್‌

ಬೆಂಗಳೂರು, ಜ. 7– ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ಪ್ರತಿಭಟಿಸಿ ಕನ್ನಡ ಸಂಘಟನೆಗಳ ಕೆಲವು ಕಾರ್ಯಕರ್ತರು ಇಂದು ನಗರದಲ್ಲಿ ಬಿಟಿಎಸ್‌ ಬಸ್ಸೊಂದಕ್ಕೆ ಬೆಂಕಿ ಹಚ್ಚಿ, ಹಲವು ವಾಹನಗಳ ಮೇಲೆ ಕಲ್ಲುಗಳನ್ನು ತೂರಿದರು. ಸೋಮವಾರದ ಬೆಂಗಳೂರು ಬಂದ್‌ಗೆ ಹಿಂದೆಂದೂ ಇರದಷ್ಟು ವ್ಯಾಪಕ ಬಂದೋಬಸ್ತ್‌ ಮಾಡುತ್ತಿರುವುದರ ನಡುವೆಯೇ ಈ ಘಟನೆಗಳು ನಡೆದಿವೆ.

ಈ ಮಧ್ಯೆ ಚಾಮರಾಜಪೇಟೆ 6ನೇ ಮುಖ್ಯರಸ್ತೆಯಲ್ಲಿ ರಾತ್ರಿ ಲಾರಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಕೆಲವೆಡೆ ಕಲ್ಲು ತೂರಿದ ಪ್ರಕರಣ ವರದಿಯಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಬಂದೀಖಾನೆ ಸಚಿವರ ಆಪ್ತ ಸಹಾಯಕನ ಬಂಧನ

ಬೀದರ್‌, ಜ. 7– ಹುಮನಾಬಾದ್‌ನಲ್ಲಿ ರಾಜ್ಯ ಬಂದೀಖಾನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಿರಾಜುದ್ದೀನ್‌ ಪಟೇಲ್‌ ಅವರ ಅಧಿಕೃತ ಕಾರ್ಯಾಲಯದ ಬಳಿ ನಿಂತಿದ್ದ ಟೆಂಪೊವೊಂದರಿಂದ ನಿನ್ನೆ ಮಧ್ಯರಾತ್ರಿ 1.54 ಲಕ್ಷ ಮೌಲ್ಯದ ಮತ್ತು ಸಚಿವರ ಆಪ್ತ ಸಹಾಯಕ ಮಾಣಿಕರಾವ್‌ ಅವರ ಮನೆಯಿಂದ 72 ಸಾವಿರ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡಿರುವುದಾಗಿ ಪೊಲೀಸ್‌ ಮೂಲಗಳು ಹೇಳಿವೆ.

ಈ ಸಂಬಂಧ ಸಚಿವರ ಆಪ್ತ ಸಹಾಯಕ ಮಾಣಿಕರಾವ್‌ ಮತ್ತು ಇತರ 9 ಜನರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.