ಚಿಕ್ಕಮಗಳೂರು, ಏ. 8– ಪ್ರಯಾಣಿಕರ ವಾಹನವನ್ನು ಅಡ್ಡಗಟ್ಟಿ ದರೋಡೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮೂಡಿಗೆರೆ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಮಾನತು ಮಾಡಿದ್ದಾರೆ.
ಬಾಬಾಬುಡನ್‌ಗಿರಿಯಲ್ಲಿ ಈಚೆಗೆ ನಡೆದ ಉರುಸ್‌ಗೆ ಬಂದಿದ್ದ ಬೆಳ್ತಂಗಡಿಯ ಐವರು ಯಾತ್ರಿಗಳು, ಊರಿಗೆ ವಾಪಸಾಗುತ್ತಿದ್ದ ವೇಳೆ ಅವರ ವಾಹನವನ್ನು ಕೊಟ್ಟಿಗೆಹಾರದ ಬಳಿ ತಡೆದು ನಿಲ್ಲಿಸಿದ ಪೊಲೀಸರು, ಪ್ರಯಾಣಿಕರ ಮೇಲೆ ವಿನಾಕಾರಣ ಹಲ್ಲೆ ಮಾಡಿ ಸಿಗರೇಟ್‌ನಿಂದ ಅವರ ಮೈಕೈಗಳನ್ನು ಸುಟ್ಟಿದ್ದಲ್ಲದೆ, 5 ಸಾವಿರ ರೂಪಾಯಿಗಳನ್ನು ದೋಚಿರುವುದಾಗಿ ಆರೋಪಿಸಲಾಗಿದೆ.
ನಟ ಕಿಶನ್ ಕುಮಾರ್ ಶಾಮೀಲು
ನವದೆಹಲಿ, ಏ. 8 (ಯುಎನ್‌ಐ, ಪಿಟಿಐ)– ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಹ್ಯಾನ್ಸಿ ಕ್ರೊನಿಯೆ ಮತ್ತು ತಂಡದ ಮೂವರು ಆಟಗಾರರನ್ನು ಒಳಗೊಂಡ ಪೂರ್ವ ನಿಯೋಜಿತ ಪಂದ್ಯ ಮತ್ತು ಬೆಟ್ಟಿಂಗ್ ಪ್ರಕರಣದಲ್ಲಿ ಚಿತ್ರನಟ ಕಿಶನ್ ಕುಮಾರ್ ಅವರೂ ಶಾಮೀಲಾಗಿದ್ದಾರೆ ಎಂದು ಪೊಲೀಸರ ಬಂಧನದಲ್ಲಿರುವ ರಾಜೇಶ್ ಕಲ್ರಾ ಹೇಳಿದ್ದು, ಪ್ರಕರಣ ಹೊಸ ತಿರುವು ಪಡೆದಿದೆ.
ಸುದ್ದಿಸಂಸ್ಥೆಗೆ ಈ ಕುರಿತ ವಿವರಗಳನ್ನು ನೀಡಿರುವ ಪೊಲೀಸ್ ಜಂಟಿ ಆಯುಕ್ತ ಕೆ.ಕೆ. ಪಾಲ್ ಅವರು ಕಿಶನ್ ಕುಮಾರ್ ಅವರ ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.