ಬೆಂಗಳೂರು, ಜೂನ್ 4– ನಗರ ವಿಮಾನ ನಿಲ್ದಾಣದ ಬಳಿ ಇರುವ ಏರ್ ಕಾರ್ಗೋ ಸಂಕೀರ್ಣದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‌ನ (ಎಂಎಸ್‌ಐಎಲ್) ಸರಕು ಉಗ್ರಾಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಕಂಪ್ಯೂಟರ್, ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ವಿವಿಧ ಬಗೆಯ ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಬೆಂಕಿ ಆಕಸ್ಮಿಕದಿಂದ ಯಾವುದೇ ಜೀವ ಹಾನಿಯಾಗಿಲ್ಲ.
ಈ ಬೆಂಕಿ ಆಕಸ್ಮಿಕಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕೆಲವರು ಇದು ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ನಿಖರವಾದ ಕಾರಣಕ್ಕಾಗಿ ಪೊಲೀಸರು ತನಿಖೆ ನಡೆಸುತ್ತಿ ದ್ದಾರೆ. ಕಳೆದ ವರ್ಷವೂ ಈ ಕಟ್ಟಡದ ಹೊರಭಾಗದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತ್ತು.
ಮೋಸದಾಟ: ಸಿಬಿಐನಿಂದ ‘ವಿಡಿಯೊ’ ವೀಕ್ಷಣೆ
ನವದೆಹಲಿ, ಜೂನ್ 4– ಮೋಸದಾಟಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಒಪ್ಪಿಸಿದ ‘ವಿಡಿಯೊ ಕ್ಯಾಸೆಟ್’ಗಳ ವೀಕ್ಷಣೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಇಂದು ಪ್ರಾರಂಭಿಸಿತು.
‘ಅಪರಾಧ ವಿಭಾಗದ ಅಧಿಕಾರಿಗಳು ನಿನ್ನೆ ಮನೋಜ್ ಪ್ರಭಾಕರ್ ಸಲ್ಲಿಸಿದ ರಹಸ್ಯ ವಿಡಿಯೊ ಟೇಪ್‌ಗಳನ್ನು
ವೀಕ್ಷಿಸುತ್ತಿದ್ದಾರೆ. 40 ಗಂಟೆಯಷ್ಟು ಉದ್ದವಿರುವ ಈ ವಿಡಿಯೊ ಟೇಪ್ ಬಹಳ ನಿಧಾನವಾಗಿದೆ. ಸಂಪೂರ್ಣ ವೀಕ್ಷಣೆಗೆ ಕನಿಷ್ಠ ಎರಡು ದಿನಗಳು ಬೇಕಾಗುತ್ತವೆ’ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.