ಬೆಂಗಳೂರು, ಜೂನ್ 6– ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ‘ವಿಶ್ವ ಬಂಡವಾಳ ಹೂಡಿಕೆದಾರರ ಸಮ್ಮೇಳನ’ದಿಂದ ಇಂದಿನವರೆಗೆ ಒಟ್ಟು ಎಂಟು ಸಾವಿರ ಕೋಟಿ ರೂಪಾಯಿಗಳ ಬಂಡವಾಳ ರಾಜ್ಯದ ವಿವಿಧ ವಲಯಕ್ಕೆ ಹರಿದುಬರಲಿದೆ.
ಇದರ ಜೊತೆಯಲ್ಲಿ ಮಾಹಿತಿ ತಂತ್ರಜ್ಞಾನ, ಬೃಹತ್ ಹಾಗೂ ಸಣ್ಣ ಕೈಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಆಸಕ್ತರಾದ ಹಲವು ಉದ್ಯಮಿಗಳು ತಮ್ಮ ಪ್ರಸ್ತಾವಗಳನ್ನು ಎರಡು ದಿನಗಳ ಅವಧಿಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮುಂದೆ ಸಲ್ಲಿಸಿದ್ದಾರೆ.
ಈ ಬಗ್ಗೆ ರಾಜ್ಯ ಸರ್ಕಾರವು ದೇಶ– ವಿದೇಶದ ಸುಮಾರು 15 ಉದ್ಯಮಿಗಳ ಜತೆ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದೆ.
ಬಾರ್ಜ್ ಮೌಂಟೆಡ್ ಸ್ಥಾವರದ ಕಾಮಗಾರಿ ಚುರುಕು
ಮಂಗಳೂರು, ಜೂನ್ 6– ರಾಜ್ಯದ ವಿದ್ಯುತ್ ಬರ ನೀಗಿಸಲು ದಕ್ಷಿಣ ಕನ್ನಡ ಜಿಲ್ಲೆಯನ್ನು ಮುಖ್ಯವಾಗಿ ಆಯ್ಕೆ ಮಾಡಿಕೊಂಡ ಸರ್ಕಾರ ಹಮ್ಮಿಕೊಂಡ ಯೋಜನೆಗಳಲ್ಲಿ ಮೊದಲ ತೇಲುತೆಪ್ಪ ವಿದ್ಯುತ್ ಸ್ಥಾವರದ (ಬಾರ್ಜ್ ಮೌಂಟೆಡ್ ವಿದ್ಯುತ್ ಸ್ಥಾವರ) ಕಾಮಗಾರಿ ಮುಂಗಾರಿನ ಬಿರು ಮಳೆಯ ನಡುವೆಯೂ ಚುರುಕಾಗಿ ನಡೆಯುತ್ತಿದೆ.
ಮುಂದಿನ ಜನವರಿ ವೇಳೆಗೆ ದೇಶದ ಮೊದಲ 220 ಮೆ.ವಾ ಸಾಮರ್ಥ್ಯದ ತಣ್ಣೀರುಬಾವಿ ಬಾರ್ಜ್ ಮೌಂಟೆಡ್ ವಿದ್ಯುತ್ ಸ್ಥಾವರ ಯೋಜನೆ ತನ್ನ ವಿದ್ಯುತ್ ಉತ್ಪಾದನೆ ಆರಂಭಿಸುವ ಎಲ್ಲ ಸೂಚನೆಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.