ADVERTISEMENT

25 ವರ್ಷಗಳ ಹಿಂದೆ: ಶನಿವಾರ 11.5.1996

​ಪ್ರಜಾವಾಣಿ ವಾರ್ತೆ
Published 10 ಮೇ 2021, 19:31 IST
Last Updated 10 ಮೇ 2021, 19:31 IST
   

ಸರ್ಕಾರ ರಚನೆಗೆ ಬಿಜೆಪಿ, ರಾಷ್ಟ್ರೀಯ ರಂಗ ಪೈಪೋಟಿ
ನವದೆಹಲಿ, ಮೇ 10 (ಪಿಟಿಐ)–
ದೆಹಲಿಯ ಗದ್ದುಗೆ ಹಿಡಿಯಲು ವಿವಿಧ ರಾಜಕೀಯ ಪಾಳಯಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದ್ದು, ಪಿ.ವಿ.ನರಸಿಂಹ ರಾವ್ ನೇತೃತ್ವದ ಸರ್ಕಾರ ರಾಜೀನಾಮೆ ನೀಡಿದೆ. ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಿಗದ ಪರಿಸ್ಥಿತಿಯಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸಲು ಒಂದೆಡೆ ಬಿಜೆಪಿ ಪ್ರಯತ್ನ ನಡೆಸಿದರೆ, ಇನ್ನೊಂದೆಡೆ ರಾಷ್ಟ್ರೀಯ ರಂಗ ಮತ್ತು ಎಡರಂಗ ಕೂಡಾ ಬಿಜೆಪಿ ಹೊರತಾದ ಸಮ್ಮಿಶ್ರ ಸರ್ಕಾರ ರಚನೆ ಯತ್ನಗಳನ್ನು ಆರಂಭಿಸಿವೆ.

ಭಾಷಾ ವಿಜ್ಞಾನಿ ಬಿಳಿಗಿರಿ ನಿಧನ
ಬೆಂಗಳೂರು, ಮೇ 10–
ಕನ್ನಡದ ಭಾಷಾ ವಿಜ್ಞಾನಿ ಹಾಗೂ ಕವಿ ಡಾ. ಎಚ್.ಎಸ್. ಬಿಳಿಗಿರಿ (71) ಅವರು ಇಂದು ಬೆಳಿಗ್ಗೆ ನವದೆಹಲಿಯಲ್ಲಿ ನಿಧನರಾದರು.

ಬಿಳಿಗಿರಿ ಅವರಿಗೆ ಖ್ಯಾತಿ ತಂದುಕೊಟ್ಟ ಕೃತಿ ‘ಆಲೋಕ’. ಕೇಶಿರಾಜನ ಶಬ್ದಮಣಿ ದರ್ಪಣಕ್ಕೆ ಅವರು ಬರೆದ ವ್ಯಾಖ್ಯಾನ ಈ ಕೃತಿ. ‘ವರ್ಣನಾತ್ಮಕ ವ್ಯಾಕರಣದ ಮೂಲತತ್ವಗಳು’, ‘ವರಸೆಗಳು’ ಅವರ ಇನ್ನೆರಡು ಪ್ರಮುಖ ಕೃತಿಗಳು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.