ADVERTISEMENT

25 ವರ್ಷಗಳ ಹಿಂದೆ: ಭಾನುವಾರ 01–09–1996

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 19:30 IST
Last Updated 31 ಆಗಸ್ಟ್ 2021, 19:30 IST
   

ರಾಯಚೂರು 5, 6ನೇ ಥರ್ಮಲ್ ಘಟಕ ನಾಳೆಯಿಂದ ವಿಸ್ತರಣೆ
ಬೆಂಗಳೂರು, ಆ. 31–
ಭಾರತೀಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಟ್ಟು 14 ಹಣಕಾಸು ಸಂಸ್ಥೆಗಳು ಒಂದಾಗಿ ನೆರವು ನೀಡಲಿರುವ ₹ 1,545 ಕೋಟಿ ವೆಚ್ಚದ ರಾಯಚೂರು ಥರ್ಮಲ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ಸಿವಿಲ್ ಕಾಮಗಾರಿ ಸೆಪ್ಟೆಂಬರ್ 2ರಂದು ವಿಧ್ಯುಕ್ತವಾಗಿ ಆರಂಭಗೊಳ್ಳಲಿದೆ.

ಕಾಮಗಾರಿ ಆರಂಭವಾದ ಮುಂದಿನ ಮೂರೂವರೆ ವರ್ಷದಲ್ಲಿ ಎರಡೂ ಘಟಕಗಳು ವಿದ್ಯುತ್ ಉತ್ಪಾದನೆಯನ್ನು ಆರಂಭಿಸಲಿವೆ.

ಈ ಘಟಕಗಳಲ್ಲಿ ಉತ್ಪಾದನೆ ಆರಂಭ ಗೊಳ್ಳುವುದರೊಂದಿಗೆ ಕರ್ನಾಟಕದ ಪ್ರಥಮ ಸೂಪರ್ ಥರ್ಮಲ್ ಸ್ಥಾವರವಾಗಿ ರಾಯಚೂರು ವಿಕಾಸಗೊಳ್ಳಲಿದೆ ಎಂದು ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಜೈರಾಜ್ ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಹೆಗಡೆ ಉಚ್ಚಾಟನೆಗೆ ದಳ ಕಾರ್ಯಕಾರಿಣಿ ಅಸ್ತು
ನವದೆಹಲಿ, ಆ. 31–
ರಾಮಕೃಷ್ಣ ಹೆಗಡೆ ಅವರ ದಿಢೀರ್ ಉಚ್ಚಾಟನೆಯ ಕ್ರಮವನ್ನು ದೃಢೀಕರಿಸಿದ ಇಂದಿನ ಜನತಾದಳದ ರಾಷ್ಟ್ರೀಯ ಕಾರ್ಯಕಾರಿ ಸಭೆಯು ಕರ್ನಾಟಕದ ಏಳು ಮಂದಿ ವಿಧಾನ ಪರಿಷತ್ ಸದಸ್ಯರು ಪಕ್ಷ ತ್ಯಜಿಸಿ ರಾಷ್ಟ್ರೀಯ ನವ ನಿರ್ಮಾಣ ಸೇರಿದ ಪ್ರಕರಣವನ್ನು ಪ್ರಸ್ತಾಪಿಸುವ ಗೋಜಿಗೂ ಹೋಗದೆ ಅದನ್ನು ನಿರ್ಲಕ್ಷ್ಯ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.