ADVERTISEMENT

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 15:55 IST
Last Updated 20 ಫೆಬ್ರುವರಿ 2011, 15:55 IST

ರಷ್ಯದ ಅಂತರಿಕ್ಷ ನೌಕೆ ಶುಕ್ರನನ್ನು ಮುಟ್ಟದು
ಮಾಸ್ಕೊ, ಫೆ. 20 - ಸೋವಿಯತ್ ಅಂತರಿಕ್ಷ ನೌಕೆಯು ಶುಕ್ರಗ್ರಹವನ್ನು ಮುಟ್ಟಲಾರದೆಂದು ತಾವು ಭಾವಿಸಿರುವುದಾಗಿ ಮಾಸ್ಕೊ ಗ್ರಹವೀಕ್ಷಣಾಲಯದ ಮುಖ್ಯಾಧಿಕಾರಿ ಡಾ. ವಿಕ್ಟರ್ ಬಜಿಕಿನ್ ಇಂದು ಇಲ್ಲಿ ವಿದೇಶೀ ವರದಿಗಾರರೊಡನೆ ಮಾತನಾಡುತ್ತಾ ತಿಳಿಸಿದರು.

ಮೊದಲು ಆಕ್ರಮಣ ವಿಸರ್ಜನೆ ಅಗತ್ಯ
ನವದೆಹಲಿ, ಫೆ. 20 - ‘ಭಾರತ - ಚೀಣಾ ಗಡಿ ಬಗ್ಗೆ ನಾವು ಹೇಳುವುದಕ್ಕೆ ಚೀಣಾವು ವಿಸ್ತೃತ ಒಪ್ಪಿಗೆ ನೀಡಿದಲ್ಲಿ ಮಾತ್ರ’ ಗಡಿ ಬಗ್ಗೆ ಮಾತುಕತೆಗೆ ತಾವು ಪೀಕಿಂಗಿಗೆ ಹೊಗುವ ಪ್ರಶ್ನೆ ಉದ್ಭವಿಸುತ್ತದೆಂದು ಪ್ರಧಾನ ಮಂತ್ರಿ ಜವಾಹರ್‌ಲಾಲ್ ನೆಹರೂರವರು ಇಂದು ರಾಜ್ಯ ಸಭೆಯಲ್ಲಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.